ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ಮಂಗಳವಾರ, 25 ಅಕ್ಟೋಬರ್ 2022 (12:39 IST)
ನವದೆಹಲಿ : ದೀಪಗಳ ಹಬ್ಬ ದೀಪಾವಳಿ ಮುನ್ನ ದಿನ (ಭಾನುವಾರ) ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಲಿದ್ದು, ಶ್ರೀರಾಮನ ದರ್ಶನ ಪಡೆದು ಅಂದು ನಡೆಯಲಿರುವ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಅವರು, ನಿರ್ಮಾಣ ಹಂತದಲ್ಲಿರುವ ಭವ್ಯ ಶ್ರೀರಾಮ ಮಂದಿರದ ಕಾಮಗಾರಿಯನ್ನು ಪರಿಶೀಲಿಸುವ ನಿರೀಕ್ಷೆಯಿದೆ.

ಬಳಿಕ ಅವರು ತಾತ್ಕಾಲಿಕ ಪ್ರವಾಸದ ವೇಳಾಪಟ್ಟಿಯಂತೆ, ರಾಮ್ ಲೀಲಾದಲ್ಲಿ ರಾಮ್ ಮತ್ತು ಇತರರ ಪಾತ್ರವನ್ನು ಬರೆಯುವವರನ್ನು ಸ್ವಾಗತಿಸಲು ರಾಮ್ ಕಥಾ ಪಾರ್ಕ್ಗೆ ಭೇಟಿ ನೀಡಬಹುದು. 

ನರೇಂದ್ರ ಮೋದಿ ಆಗಮನ ಹಿನ್ನಲೆ ರಾಮಮಂದಿರ ನಿರ್ಮಾಣ ಸಮಿತಿಯ (ಆರ್ಎಂಸಿಸಿ) ಎರಡು ದಿನಗಳ ಪರಿಶೀಲನಾ ಸಭೆ ನಡೆಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರು ರಾಮಮಂದಿರದ ಸುಮಾರು 50 ಪ್ರತಿಶತದಷ್ಟು ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇದನ್ನು ಪ್ರಧಾನಮಂತ್ರಿಗಳಿಗೆ ವಿವರಿಸಲಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ