ಮಜಿತಾ ಮಾನನಷ್ಟ ಮೊಕದ್ದಮೆ: ದೆಹಲಿ ಸಿಎಂ ಕೇಜ್ರಿವಾಲ್‌ಗೆ ಕೋರ್ಟ್ ಜಾಮೀನು

ಶುಕ್ರವಾರ, 29 ಜುಲೈ 2016 (17:03 IST)
ಪಂಜಾಬ್ ಕಂದಾಯ ಸಚಿವ ಬಿಕ್ರಮ್ ಮಜಿತಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಅವರಿಗೆ ಜಾಮೀನು ನೀಡಿದೆ.
 
ನಗರದ ಸ್ಥಳೀಯ ಕೋರ್ಟ್‌ಗೆ ಆಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ತಾಕತ್ತಿದ್ರೆ ಕಂದಾಯ ಸಚಿವರು ನನ್ನನ್ನು ಬಂಧಿಸಲಿ. ಇಲ್ಲವಾದಲ್ಲಿ ಮುಂದಿನ ಆರು ತಿಂಗಳೊಳಗೆ ನಾನು ಅವರನ್ನು ಬಂಧಿಸುತ್ತೇನೆ.ಮಜಿತಾ ಆರಂಭಿಸಿದ ಡ್ರಗ್ಸ್ ವಹಿವಾಟಿನಿಂದ ಪಂಜಾಬ್ ರಾಜ್ಯದ ಜನತೆಯ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  
 
ಕಳೆದ ಮೇ ತಿಂಗಳಲ್ಲಿ ಮಜಿತಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕೇಜ್ರಿವಾಲ್ , ಸಂಜಯ್ ಸಿಂಗ್‌ಗೆ ಜಾಮೀನು ದೊರೆತಿದ್ದು, ಮತ್ತೊಬ್ಬ ಆಪ್ ನಾಯಕ ಆಶೀಶ್ ಖೇತಾನ್‌ ಆಕ್ಟೋಬರ್ 15 ರಂದು ನಡೆಯಲಿರುವ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ದೆಹಲಿ ಸಿಎಂ ಕೇಜ್ರಿವಾಲ್, ಸಂಜಯ್ ಸಿಂಗ್ ಮತ್ತು ಖೇತಾನ್ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಕುಟುಂಬದ ಗೌರವ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. 
 
ಕೇಜ್ರಿವಾಲ್ ಮತ್ತು ಇತರ ಆಪ್ ನಾಯಕರಿಗೆ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಹವ್ಯಾಸವಾಗಿದೆ ಎಂದು ಪಂಜಾಬ್ ಕಂದಾಯ ಸಚಿವ ಬಿಕ್ರಂ ಮಜಿತಾ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ