ಆರ್‌ಎಸ್ಎಸ್ ಕಚೇರಿ ಬಳಿ ಸ್ಪೋಟ: ನಾಲ್ಕು ಮಂದಿಗೆ ಗಾಯ

ಶುಕ್ರವಾರ, 3 ಮಾರ್ಚ್ 2017 (08:28 IST)
ಕೇರಳದ ಕೋಳಿಕ್ಕೋಡ್‌ನಲ್ಲಿ ಆರ್‌ಎಸ್ಎಸ್ ಕಚೇರಿ ಬಳಿ ಬಾಂಬ್ ಸ್ಪೋಟವಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ ನಡಪುರಮ್‌ನಲ್ಲಿರುವ ಕಚೇರಿಯ ಮುಂದೆ ಈ ದಾಳಿ ನಡೆದಿದ್ದು ನಾಲ್ವರು ಆರ್‌ಎಸ್ಎಸ್ ಕಾರ್ಯಕರ್ತರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 
 
ಕೇರಳ ಮುಖ್ಯಮಂತ್ರಿ ತಲೆಗೆ ಬಹುಮಾನ ಘೋಷಿಸಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
 
ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಗೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೊಣೆಯಾಗಿದ್ದು ಅವರ ತಲೆ ತಂದುಕೊಟ್ಟವರಿಗೆ 1 ಕೋಟಿ ಕೊಡುವುದಾಗಿ ಮಧ್ಯಪ್ರದೇಶದ ಆರ್‍ಎಸ್‍ಎಸ್ ಮುಖಂಡ ಡಾ.ಚಂದ್ರಾವತ್ ಘೋಷಿಸಿದ್ದರು.
 
ಕೇರಳದಲ್ಲಿ ಸಂಘಪವಾರ ಮತ್ತು ಸಿಪಿಎಂ ಕಾರ್ಯಕರ್ತರ ನಡುವಿನ ಕಾದಾಟ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಳೆದ ತಿಂಗಳು ಬಿಜೆಪಿ ಮುಖಂಡ ಸಂತೋಷ್ ಅವರ ಕೊಲೆಯಾಗಿತ್ತು.
 

ವೆಬ್ದುನಿಯಾವನ್ನು ಓದಿ