ಫಸ್ಟ್ ಟೈಂ ಸಂಪ್ರದಾಯ ಕೈಬಿಟ್ಟ ಕೇರಳ ಚರ್ಚ್!

ಬುಧವಾರ, 7 ಸೆಪ್ಟಂಬರ್ 2022 (13:56 IST)
ತಿರುವನಂತಪುರಂ : ಕೇರಳದಲ್ಲಿ ಮೊದಲ ಬಾರಿಗೆ ಕ್ಯಾಥೋಲಿಕ್ ಚರ್ಚ್ನಲ್ಲಿ ಪುರಾತನ ಸಂಸ್ಕೃತಿಯಾದ ಪೆಟ್ಟಿಗೆಯಲ್ಲಿ ಹೂಳುವ ಸಂಪ್ರದಾಯವನ್ನು ಕೈಬಿಟ್ಟು ಹೊಸ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ.

ಕ್ರಿಶ್ಚನ್ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಸತ್ತ ವ್ಯಕ್ತಿಯನ್ನು ಪೆಟ್ಟಿಗೆಯಲ್ಲಿ ಹೂಳು ಸಮಾಧಿ ಮಾಡುತ್ತಾರೆ ಆದರೆ ಆಲಪ್ಪುಳ ಜಿಲ್ಲೆಯ ಅಥುರ್ಂಕಲ್ನ ಸೇಂಟ್ ಜಾರ್ಜ್ ಚರ್ಚ್ನಲ್ಲಿ ಮೊದಲಿನಿಂದಲೂ ಇದ್ದ ಪೆಟ್ಟಿಗೆಯಲ್ಲಿ ಸಮಾಧಿ ಮಾಡುವ ಸಂಸ್ಕೃತಿಯನ್ನು ಅಂತ್ಯಗೊಳಿಸಲಾಗಿದೆ.

ಪೆಟ್ಟಿಗೆಯಲ್ಲಿ ಹೂಳಿದ್ದ ಶವಗಳು ಎಷ್ಟೇ ವರ್ಷಗಳಾದರೂ ಕೊಳೆಯದ ಕಾರಣ ಈ ಪದ್ಧತಿಯನ್ನು ಕೈಬಿಡಲಾಗಿದೆ. ಪೆಟ್ಟಿಗೆಯ ಬದಲು ಶವವನ್ನು ಬಟ್ಟೆಯಲ್ಲಿ ಸುತ್ತಿ ಸಮಾಧಿ ಮಾಡಲು ಇದೀಗ ಆಲಪ್ಪುಳ ಜಿಲ್ಲೆಯ ಅಥುರ್ಂಕಲ್ನ ಸೇಂಟ್ ಜಾರ್ಜ್ ಚರ್ಚ್ ನಿರ್ಧರಿಸಿದೆ. ಈ ಮೂಲಕ ಬಹು ಹಳೆಯ ಸಂಸ್ಕೃತಿಯಾಗಿರುವ ಪೆಟ್ಟಿಗೆಯಲ್ಲಿ ಹೂಳುವ ಸಂಸ್ಕೃತಿಯು ಅಂತ್ಯಗೊಂಡಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ