ಕೇರಳದ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗೆ ಸಿಎಂ ನೇರ ಹೊಣೆ: ಅಮಿತ್ ಶಾ

ಮಂಗಳವಾರ, 3 ಅಕ್ಟೋಬರ್ 2017 (17:56 IST)
ಕೇರಳದಲ್ಲಿ ನಡೆಯುತ್ತಿರುವ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ರಾಜಕೀಯ ಹತ್ಯೆಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇರ ಹೊಣೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.
  
ಕಳೆದ 2001ರಿಂದ ಕೇರಳದಲ್ಲಿ 120 ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗಳಾಗಿವೆ. ರಾಜಕೀಯ ಹತ್ಯೆಗಳಿಗೆ ಯಾರು ಹೊಣೆ ಎನ್ನುವುದನ್ನು ಸಿಪಿಐ(ಎಂ) ಸರಕಾರ ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದ್ದಾರೆ.
 
ಕೇರಳದಲ್ಲಿ ನಡೆಯುತ್ತಿರುವ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರನ್ನು ಯಾರು ಹತ್ಯೆ ಮಾಡುತ್ತಿದ್ದಾರೆ? ಒಂದು ವೇಳೆ ನನ್ನ ಪ್ರಶ್ನೆಗೆ ಉತ್ತರಿಸದಿದ್ದಲ್ಲಿ ಸಿಎಂ ನೇರ ಹೊಣೆಯಾಗಿದ್ದಾರೆ ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.
 
ಕೇರಳದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ ಜನ ರಕ್ಷ ಯಾತ್ರಾ ಸಮಾವೇಶ ಉದ್ಘಾಟನೆಗಾಗಿ ಅಮಿತ್ ಶಾ, ಕಣ್ಣೂರು ಜಿಲ್ಲೆಯ ಪಯಣ್ಣೂರುಗೆ ಆಗಮಿಸಿದ್ದಾರೆ. ಸಮಾವೇಶ ಆಕ್ಟೋಬರ್ 17 ರಂದು ಮುಕ್ತಾಯವಾಗಲಿದ್ದು ರಾಜ್ಯದಾದ್ಯಂತ ಪ್ರವಾಸ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. 
 
ರಾಜ್ಯದಲ್ಲಿ ಕಮ್ಯೂನಿಷ್ಠ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಆರೆಸ್ಸೆಸ್, ಬಿಜೆಪಿ ನಾಯಕರ ಹತ್ಯೆಗಳಾಗುತ್ತಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ