ಸೀಟ್‌ ಸಿಗದಿದ್ದಕ್ಕೆ ರೈಲಿನ ಎಂಜಿನ್ ಹತ್ತಿದ ಪ್ರಯಾಣಿಕರು: ವಿಡಿಯೋ ವೈರಲ್

Sampriya

ಭಾನುವಾರ, 9 ಫೆಬ್ರವರಿ 2025 (19:36 IST)
Photo Courtesy X
ವಾರಣಾಸಿ: ಉತ್ತರಪ್ರದೇಶದ ಪ್ರಯಾಗ್​ ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಪ್ರಪಂಚದಾದ್ಯಂತ ಭಕ್ತಾಧಿಗಳು ಆಗಮಿಸಿ,  ಪವಿತ್ರ ಸ್ನಾನ ಮಾಡುತ್ತಿದ್ದಾರೆ.  ಭಕ್ತರ ದಂಡೇ ಸಾಗುತ್ತಿದ್ದು, ಸಾರಿಗೆ ಸಂಪರ್ಕ ಸೇರಿದಂತೆ ವಿಮಾನ, ರೈಲು ತುಂಬಿ ತುಳುಕುತ್ತಿವೆ.

ಇದೀಗ ರೈಲಿನಲ್ಲಿ ಸೀಟ್ ಸಿಗದಿದ್ದಕ್ಕೆ ರೈಲಿನ ಎಂಜಿನ್​(ರೈಲು ಪೈಲಟ್​ ಜಾಗ) ಒಳಗೆ ಏರುತ್ತಿರುವ ವಿಡಿಯೋಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಇದು ವಾರಣಿಸಿಯಿಂದ ಪ್ರಾಯಾಗ್​ರಾಜ್​ಗೆ ತೆರಳುತ್ತಿರುವ ರೈಲು ಎಂದು ಹೇಳಲಾಗಿದೆ.

ನಿಲ್ದಾಣಕ್ಕೆ ಬಂದ ರೈಲಿಗೆ ಹತ್ತಲು ಪ್ರಯಾಣಿಕರು ಹರ ಸಾಹಸ ಪಡುತ್ತಿದ್ದಾರೆ. ಸೀಟ್​ ಸಿಗದ ಕಾರಣ ಸಿಟ್ಟಿಗೆದ್ದ ಪ್ರಯಾಣಿಕರು ರೈಲಿನ ಎಂಜಿನ್​ ಒಳಗೆ ಹತ್ತಿ ಕುಳಿತುಕೊಳ್ಳವ ದೃಶ್ಯಗಳು ವಿಡಿಯೋದಲ್ಲಿ ಕಾಣ ಸಿಗುತ್ತಿವೆ.

ಜನದಟ್ಟಣೆಯಿಂದ ಸೀಟ್​ ಸಿಗದ ಕೆಲ ಪ್ರಯಾಣಿಕರಿ ಗದ್ದಲ ಮಾಡಿ ರೈಲು ಎಂಜಿನ್​ ಒಳಗೆ ಹತ್ತಿ ಕೂತಿದ್ದಾರೆ. ಬಳಿಕ ಪೊಲೀಸರು ಬಂದು ಪ್ರಯಾಣಿಕರನ್ನು ಸಮಾಧಾನ ಮಾಡಿ, ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಇದೀಗ ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

वाराणसी में ट्रेन के इंजन पर यात्रियों ने किया कब्जा

वाराणसी में भारी भीड़ के कारण महाकुंभ स्पेशल ट्रेन के इंजन में चढ़े यात्री, पायलट को बैठने की जगह नहीं अंदर से दरवाजा किया बंद फिर RPF जवान ने निकाला बाहर.#varanasi #Train #viralvideo pic.twitter.com/h93bbXD8xX

— NBT Hindi News (@NavbharatTimes) February 9, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ