ಗಡಿನಾಡು ಕಾಸರಗೋಡಿನಲ್ಲಿ ಭಾರೀ ಪಟಾಕಿ ದುರಂತ: ಸ್ಪೋಟದ ಭಯಾನಕ ವಿಡಿಯೋ ಇಲ್ಲಿದೆ

Krishnaveni K

ಮಂಗಳವಾರ, 29 ಅಕ್ಟೋಬರ್ 2024 (09:22 IST)
ಕಾಸರಗೋಡು: ಕೇರಳದ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಭಾರೀ ಪಟಾಕಿ ದುರಂತ ಸಂಭವಿಸಿದ್ದು, ಸ್ಪೋಟದ ಭಯಾನಕ ವಿಡಿಯೋ ಈಗ ವೈರಲ್ ಆಗಿದೆ. ಸ್ಪೋಟದಿಂದಾಗಿ ಹಲವರು ಗಾಯಗೊಂಡಿದ್ದಾರೆ.

ಕಾಸರಗೋಡಿನ ನೀಲೇಶ್ವರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಮೂವಾಂಕುಳಿ ಚಾಮುಂಡಿ ದೇವಾಲಯದಲ್ಲಿ ಈ ದುರ್ಘಟನೆ ನಡೆದಿದೆ. ದೇವಾಲಯ ಜಾತ್ರೆ ನಿಮಿತ್ತ ಸಾಕಷ್ಟು ಜನ ಸೇರಿದ್ದರು. ಉತ್ಸವ ಭರ್ಜರಿಯಾಗಿ ನಡೆಯುತ್ತಿತ್ತು. ಈ ವೇಳೆ ದೇವಾಲಯದ ಸಿಡಿಮದ್ದು ಪ್ರದರ್ಶನಕ್ಕೆ ತಂದಿಟ್ಟ ಪಟಾಕಿ ಗೋದಾಮಿಗೆ ಬೆಂಕಿ ಬಿದ್ದಿದೆ.

ಪರಿಣಾಮ ಭಾರೀ ಸ್ಪೋಟವಾಗಿದೆ. ಬೆಂಕಿಯ ಕೆನ್ನಾಲಗೆ ಬಹಳ ದೂರದವರೆಗೆ ವ್ಯಾಪಿಸಿದೆ. ಸ್ಥಳದಲ್ಲಿ ಸಾಕಷ್ಟು ಜನ ನೆರೆದಿದ್ದರಿಂದ ಸ್ಪೋಟದ ತೀವ್ರತೆಗೆ ಹಲವರು ಗಾಯಗೊಂಡಿದ್ದಾರೆ. ಸ್ಪೋಟದ ಭಯಾನಕತೆಗೆ ಬೆದರಿದ ಜನ ದಿಕ್ಕಾಪಾಲಾಗಿ ಓಡಾಗಿದ್ದಾರೆ. ಘಟನೆಯಲ್ಲಿ 150 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಈ ಪೈಕಿ 8 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ತಕ್ಷಣವೇ ನೀಲೇಶ್ವರಂ, ಕಾಞಂಗಾಡು  ಮತ್ತು ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸ್ಪೋಟದ ತೀವ್ರತೆಗೆ ಗೋದಾಮು ಛಿದ್ರವಾಗಿದೆ. ಆ ಭಯಾನಕ ವಿಡಿಯೋ ಇಲ್ಲಿದೆ ನೋಡಿ:

More than 150 people were injured, including eight seriously, in a fireworks accident during a temple festival near Neeleswaram in Kerala's Kasaragod late on Monday. A spark from temple fell on firecrackers stored nearby causing chaos and panic.#Moovalamkuzhichamunditemplepic.twitter.com/Hy5brQ83gK

— V Chandramouli (@VChandramouli6) October 29, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ