ಗಣರಾಜ್ಯೋತ್ಸವ ಟ್ಯಾಬ್ಲೋ ವಿವಾದ: ಕೇರಳವೂ ತಿರಸ್ಕೃತ ಪಟ್ಟಿಗೆ

ಶುಕ್ರವಾರ, 3 ಜನವರಿ 2020 (11:35 IST)
ನವದೆಹಲಿ: ಗಣರಾಜ್ಯೋತ್ಸವದ ಸ್ತಬ್ಧಚಿತ್ರ ವಿವಾದ ಈಗ ಕೇಂದ್ರದ ವಿರುದ್ಧ ವಿಪಕ್ಷಗಳ ಆಡಳಿತವಿರುವ ರಾಜ್ಯಗಳು ಸಿಡಿದೇಳಲು ಮತ್ತೊಂದು ಕಾರಣವಾಗುತ್ತಿದೆ.


ಪ.ಬಂಗಾಲ, ಬಿಹಾರ ಬಳಿಕ ಈಗ ಕೇರಳದ ಸ್ತಬ್ಧಚಿತ್ರವನ್ನೂ ಕೇಂದ್ರ ಆಯ್ಕೆ ಸಮಿತಿ ತಿರಸ್ಕರಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಸ್ತಬ್ಧಚಿತ್ರ ತಯಾರಿಗೆ ಕೆಲವೊಂದು ಮಾನದಂಡ ವಿಧಿಸಲಾಗಿದ್ದು ಅದನ್ನು ಒಳಗೊಳ್ಳದ ಕಾರಣಕ್ಕೆ ಈ ರಾಜ್ಯಗಳ ಸ್ತಬ್ಧಚಿತ್ರ ತಿರಸ್ಕೃತವಾಗಿದೆ ಎಂದು ಕೇಂದ್ರ ಆಯ್ಕೆ ಸಮಿತಿ ಹೇಳುತ್ತಿದೆ. ಆದರೆ ಇದು ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳನ್ನೇ ಟಾರ್ಗೆಟ್ ಮಾಡುತ್ತಿರುವಂತಿದೆ ಎಂಬುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿವಾದಕ್ಕೀಗ ಮತ್ತಷ್ಟು ಕಿಚ್ಚು ಹತ್ತುವ ಲಕ್ಷಣ ಕಾಣುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ