ಫೇಸ್ ಬುಕ್ ಗೆಳೆಯ ಹುಡುಗಿಯನ್ನು ಕಿಡ್ನಾಪ್ ಮಾಡಿದ್ಯಾಕೆ?

ಶನಿವಾರ, 12 ಡಿಸೆಂಬರ್ 2020 (15:36 IST)
ನಕಲಿ ಖಾತೆ ತೆರೆದು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ಅಪ್ರಾಪ್ತೆಗೆ ಮಾಡಬಾರದ್ದನ್ನು ಮಾಡಿದ್ದಾನೆ.

ಫೇಸ್ ಬುಕ್ ನಲ್ಲಿ ಗೆಳೆತನವಾಗಿದ್ದರಿಂದ ಅಪ್ರಾಪ್ತೆಯನ್ನು ಮದುವೆಯಾಗು ಎಂದು ಯುವಕನೊಬ್ಬ ಕಿಡ್ನಾಪ್ ಮಾಡಿರುವ ಘಟನೆ ತಡವಾಗಿ ಬಯಲಿಗೆ ಬಂದಿದೆ.

ರಾಜಸ್ಥಾನದ ಶೋಯೆಬ್ ಖಾನ್ ಎಂಬಾತ ದೆಹಲಿಯ ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಕರೆದೊಯ್ದಿದ್ದನು. ಕೆಲವು ದಿನಗಳ ಬಳಿಕ ದೆಹಲಿಯಲ್ಲಿನ ಬಾರದಪುರ ವ್ಯಾಪ್ತಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

ಬಾಲಕಿಯ ತಂದೆ ಈ ಕುರಿತು ಕೇಸ್ ದಾಖಲು ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ