ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ತನ್ನ ಚಪಲ ತೀರಿಸಿಕೊಂಡ ಪಾಪಿ
ಸೋಮವಾರ, 7 ಸೆಪ್ಟಂಬರ್ 2020 (07:48 IST)
ಪಂಜಾಬ್ : ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಬಳಿಕ ಬಾಲಕಿಗೆ ಮೋಸ ಮಾಢಿದ ಘಟನೆ ಪಂಜಾಬ್ ನಲ್ಲಿ ನಡೆದಿದೆ.
2 ವರ್ಷಗಳ ಹಿಂದೆ ಆರೋಪಿ ಹಾಗೂ ಬಾಲಕಿ ಪರಸ್ಪರ ಪರಿಚಯರಾಗಿದ್ದರು. ಬಳಿಕ ಆತ ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಹಲವಾರು ಬಾರಿ ಸಂಭೋಗ ನಡೆಸಿದ್ದಾನೆ. ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಘಟನೆಯ ಬಳಿಕ ಆತ ಬಾಲಕಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಇದರಿಂದ ಬಾಲಕಿ ಆತನ ವಿರುದ್ಧ ಮ್ಯಾಟೂರ್ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಹಿನ್ನಲೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.