ದಾಮೋದರ್ ನದಿಯ ಪ್ರವಾಹ ಹೆಚ್ಚುತ್ತಿರುವುದನ್ನು ನೋಡುವ ಆಸಕ್ತಿಯಿಂದ ತೆರಳಿದ್ದ ಪೂರ್ವ ಬುರ್ದವಾನ್ ಜಿಲ್ಲೆಯ ಕಾಲಿಬಜಾರ್ ನಿವಾಸಿಯಾದ 62 ವರ್ಷ ವಯಸ್ಸಿನ ಅಂಗನವಾಡಿ ಮಹಿಳಾ ಉದ್ಯೋಗಿ ತಪಾತಿ ಚೌಧರಿ, ಕಾಲು ಜಾರಿ ನದಿಗೆ ಬಿದ್ದು ಸುಮಾರು 13 ಗಂಟೆಗಳ ಕಾಲ ನೀರಿನಲ್ಲಿ ತೇಲಾಡಿ 80 ಕಿ.ಮೀ ದೂರ ಪ್ರಯಾಣಿಸಿದ ನಂತರ ಜೀವ ಉಳಿಸಿಕೊಂಡ ವಿಚಿತ್ರ ಘಟನೆ ವರದಿಯಾಗಿದೆ.
ನದಿಯ ಪ್ರವಾಹ ನೋಡಲು ಬಂದ ತಪಾಟಿ ಚೌಧರಿ, ಕಾಲು ಜಾರಿ ನದಿಗೆ ಬಿದ್ದ ಕೂಡಲೇ ಕ್ಷಣಾರ್ಧದಲ್ಲಿಯೇ ಕೊಚ್ಚಿಹೋಗಲು ಆರಂಭಿಸಿದಳು. ನೆರವಿಗಾಗಿ ಕೂಗಿದಳು. ಆದರೆ, ಹತ್ತಿರದಲ್ಲಿ ಯಾರು ಇರಲಿಲ್ಲವಾದ್ದರಿಂದ ಆಕೆಯ ಕೂಗು ಯಾರಿಗೂ ಕೇಳದಾಯಿತು. ಧೈರ್ಯ ತಂದುಕೊಂಡು ಪೂರ್ತಿ ರಾತ್ರಿ ಕೈ ಕಾಲು ಬಡಿಯುತ್ತಾ ಕಳೆದಿದ್ದಾಳೆ. ಆದರೆ, ಆಕೆಯ ಹೋರಾಟ ಕೊನೆಗೂ ವ್ಯರ್ಥವಾಗಲಿಲ್ಲ.
ಚೌಧರಿ ಹೇಳಿದರು, "ಈ ಸ್ಥಳವು ಹೂಗ್ಲಿ ಜಿಲ್ಲೆಯ ಪರ್ಸುರಾದಲ್ಲಿ ಮುಂಡೇಶ್ವರಿ ನದಿಯ ಮಾರ್ಕುಂಡ ಫೆರ್ರಿ ಘಾಟ್ ಎಂದು ನಾನು ತಿಳಿದುಕೊಂಡಿದ್ದೇನೆ, ಅವರು ನದಿಯೊಳಗೆ ಬಿದ್ದ ಸ್ಥಳದಿಂದ 80 ಕಿ.ಮೀ.