ಕೋಲ್ಕತ್ತಾ ಆರ್ ಜಿ ಕರ್ ಆಸ್ಪತ್ರೆ ರೇಪ್ ಕೇಸ್: ತಪ್ಪಿತಸ್ಥ ಯಾರು ಎಂದು ತೀರ್ಪಿತ್ತ ನ್ಯಾಯಾಲಯ

Sampriya

ಶನಿವಾರ, 18 ಜನವರಿ 2025 (14:49 IST)
Photo Courtesy X
ಕೋಲ್ಕತ್ತಾ:  ದೇಶವನ್ನೇ ಬೆಚ್ಚಿಬೀಳಿಸಿದ ಆರ್‌ಜಿಕರ್ ಆಸ್ಪತ್ರೆಯಲ್ಲಿ ನಡೆದ ಸ್ನಾತಕೋತ್ತರ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಕೋರ್ಟ್‌ ತ್ವರಿತಗತಿಯ ತೀರ್ಪು ಹೊರಡಿಸಿದೆ.  

ವಿಚಾರಣೆ ನಡೆಸಿದ ನ್ಯಾಯಾಲಯ ಸಂಜಯ್ ರಾಯ್ ತಪ್ಪಿತಸ್ಥ ಎಂದು ಪ್ರಕಟಿಸಿದೆ. ಇನ್ನೂ ಶಿಕ್ಷೆಯ ಪ್ರಮಾಣವನ್ನು  ಜನವರಿ 20ರಂದು ಕೋರ್ಟ್‌ ಪ್ರಕಟಿಸಲಿದೆ.  

ವಿಚಾರಣೆ ಆರಂಭವಾದ 57 ದಿನಗಳಲ್ಲಿ ತೀರ್ಪು ಪ್ರಕಟ. ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.   ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ಅಧಿಕಾರಿಗಳು ಸುದೀರ್ಘವಾದ ಚಾರ್ಜ್‌ಶೀಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.  

ಅನಿರ್ಬನ್ ದಾಸ್‌ ಅವರು ಮಹತ್ವದ ತೀರ್ಪನ್ನು ಪ್ರಕಟ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ