ಕೋಲ್ಕತ್ತಾ ವೈದ್ಯೆಯ ಕಾಲು ಭಯಾನಕವಾಗಿತ್ತು: ಕುಟುಂಬ ಸದಸ್ಯರ ನೀಡಿದ ಬೆಚ್ಚಿಬೀಳಿಸುವ ಮಾಹಿತಿ

Krishnaveni K

ಗುರುವಾರ, 15 ಆಗಸ್ಟ್ 2024 (11:18 IST)
ಕೋಲ್ಕತ್ತಾ: ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಚ್ಚಿಬೀಳಿಸುವ ಅಂಶಗಳು ಹೊರಬೀಳುತ್ತಿವೆ. ಆಕೆಯ ಕುಟುಂಬಸ್ಥರು ಮೃತದೇಹ ನೋಡಿದ ಬಳಿಕ ಭಯಾನಕ ಹೇಳಿಕೆ ನೀಡಿದ್ದಾರೆ.

ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರತರಳಾಗಿದ್ದ ವೈದ್ಯೆ ಸೆಮಿನಾರ್ ಹಾಲ್ ನಲ್ಲಿ ತಡರಾತ್ರಿ ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಆಕೆಯ ಮೃತದೇಹವನ್ನು ನೋಡಿದ ಕುಟುಂಬಸ್ಥರು ಭಯಾನಕ ಅಂಶಗಳನ್ನು ಹೊರಹಾಕಿದ್ದಾರೆ.

ಎರಡು ಗಂಟೆ ನಮ್ಮನ್ನು ಕಾಯಲು ಹೇಳಿದರು. ಬಳಿಕವಷ್ಟೇ ಮೃತದೇಹ ನೋಡಲು ಅವಕಾಶ ಕೊಟ್ಟರು. ಆಕೆಯ ಕಾಲು 90 ಡಿಗ್ರಿಯಷ್ಟು ಬಾಗಿತ್ತು. ಆಕೆಯ ಕಾಲು ಎಷ್ಟು ಭಯಾನಕವಾಗಿತ್ತೆಂದರೆ ಇದು ಒಬ್ಬನಿಂದ ಆದ ಅತ್ಯಾಚಾರವಲ್ಲ. ಇದೊಂದು ಗ್ಯಾಂಗ್ ರೇಪ್ ಅನಿಸುತ್ತಿದೆ ಎಂದಿದ್ದಾರೆ.

ಮರಣೋತ್ತರ ವರದಿಯಲ್ಲೂ ಆಕೆಯ ಖಾಸಗಿ ಅಂಗಾಗಳಿಂದ ರಕ್ತಸ್ರಾವ, ಹಾನಿಯಾಗಿದೆ ಎನ್ನಲಾಗಿದೆ. ಅಲ್ಲದೆ, ಆಕೆಯ ತೊಡೆ, ತುಟಿ, ಕುತ್ತಿಗೆ ಭಾಗದಲ್ಲಿ ಗಾಯವಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ನೀಡಿರುವ ಭೀಕರ ವರದಿಗಳನ್ನು ನೋಡಿದರೆ ಇದು ಒಬ್ಬರಿಂದಾದ ಕೃತ್ಯವಲ್ಲ ಎಂದು ಅನೇಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಈಗಾಗಲೇ ಬಂಧಿತನಾಗಿರುವ ಆರೋಪಿ ಸಂಜಯ್ ನನ್ನ ವಿಚಾರಣೆ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ