ದಾಖಲೆಯ 11 ನೇ ಬಾರಿ ಧ್ವಜಾರೋಹಣ ನೆರವೇರಿಸಿದ ನರೇಂದ್ರ ಮೋದಿ

Krishnaveni K

ಗುರುವಾರ, 15 ಆಗಸ್ಟ್ 2024 (08:36 IST)
ನವದೆಹಲಿ: 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಇಂದು ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ದಾಖಲೆ ಮಾಡಿದರು. ಇದು 11 ನೇ ಬಾರಿಗೆ ಮೋದಿ ಧ್ವಜಾರೋಹಣ ಮಾಡಿದ್ದಾರೆ.

ಇದುವರೆಗೆ ಭಾರತದ ಯಾವುದೇ ಪ್ರಧಾನಿಯೂ ಸತತವಾಗಿ ಇಷ್ಟು ಬಾರಿ ಧ್ವಜಾರೋಹಣ ಮಾಡಿದ ದಾಖಲೆಯೇ ಇಲ್ಲ. ಮೋದಿ ಈ ದಾಖಲೆಯನ್ನು ಮಾಡಿದ್ದಾರೆ. ಎಂದಿನಂತೇ ಪೇಟ ಧರಿಸಿ ತಮ್ಮ ಮೆಚ್ಚಿನ ನೀಲಿ ಸೂಟ್ ಧರಿಸಿ ಧ್ವಜಾರೋಹಣ ನೆರವೇರಿಸಿದ ಮೋದಿ 1 ಗಂಟೆಗಳ ಕಾಲ ಸುದೀರ್ಘ ಭಾಷಣ ಮಾಡಿದ್ದಾರೆ.

ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಪೂರ್ವಜರ ರಕ್ತ ನಮ್ಮ ಮೈಯಲ್ಲಿ ಹರಿಯುತ್ತಿದೆ. ದೇಶಕ್ಕಾಗಿ ಬದುಕೋಣ, ದೇಶವನ್ನು ಸಮೃದ್ಧಿ ಮಾಡೋಣ. ಅಂದು ಕೇವಲ 40 ಕೋಟಿ ಜನರು ಸ್ವಾತಂತ್ರ್ಯ ಹೋರಾಟದಲ್ಲಿದ್ದರು. ಇಂದು ನಾವು 140 ಕೋಟಿ ಜನರಿದ್ದೇವೆ. ದೇಶವನ್ನು ಸದೃಢಗೊಳಿಸುವ ಸಂಕಲ್ಪ ಮಾಡೋಣ ಎಂದರು.

ಇಂದು ತಮ್ಮ ಜೀವನದುದ್ದಕ್ಕೂ ದೇಶಕ್ಕಾಗಿ ಹೋರಾಡಿದವರಿಗೆ ಗೌರವ ಸಲ್ಲಿಸುವ ಹಬ್ಬವಾಗಿದೆ. ಈ ಹಿಂದೆ ಜನರು ಸರ್ಕಾರದ ಬಳಿ ಹೋಗುತ್ತಿದ್ದರು. ಆದರೆ ಈಗ ಸರ್ಕಾರವೇ ಜನರ ಬಳಿ ಬರುತ್ತಿದೆ. 10 ವರ್ಷಗಳಲ್ಲಿ ದೇಶದ ಯುವ ಜನರ ಕನಸುಗಳಿಗೆ ರೆಕ್ಕೆ ಬಂದಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ