ನ್ಯಾಯಾಂಗ ನಿಂದನೆ ಕೇಸ್: ನಿವೃತ್ತ ನ್ಯಾಯಮೂರ್ತಿ ಕರ್ಣನ್ ಬಂಧನ

ಮಂಗಳವಾರ, 20 ಜೂನ್ 2017 (20:53 IST)
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಕೋಲ್ಕತ್ತಾ ಹೈಕೋರ್ಟ್`ನ ನಿವೃತ್ತ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರನ್ನ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಬಂಧಿಸಲಾಗಿದೆ.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಕರ್ಣನ್ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ತೀರ್ಪಿನ ಬಳಿಕ ಮೇ 9ರಿಂದ ಪೊಲೀಸರ ಕೈಗೆ ಸಿಗದೇ ಕರ್ಣನ್ ತಲೆಮರೆಸಿಕೊಂಡಿದ್ದರು. ಹಾಲಿ ನ್ಯಾಯಾಧೀಶರಾಗಿ ಶಿಕ್ಷೆಗೆ ಗುರಿಯಾದ  ಕುಖ್ಯಾತಿಗೆ ಕರ್ಣನ್ ಪಾತ್ರರಾಗಿದ್ದಾರೆ. ಜೂನ್ 12ರಂದು ಕರ್ಣನ್ ನಿವೃತ್ತಿ ಹೊಂದಿದ್ದರು.

ಕರ್ಣನ್ ಬಂಧನಕ್ಕೆ ಕೋಲ್ಕತ್ತಾ ಪೊಲೀಸರು ಹಲವು ಬಾರಿ ಚೆನ್ನೈಗೆ ಬಂದು ಬರಿಗೈಯಲ್ಲಿ ವಾಪಸ್ಸಾಗಿದ್ದರು. ಸುಪ್ರೀಂಕೋರ್ಟ್`ನಲ್ಲಿ ಕರ್ಣನ್ ಪರ ವಕೀಲರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಸಹ ತಿರಸ್ಕೃತಗೊಂಡಿತ್ತು. ಕೊಯಂಬತ್ತೂರಿನಿಂದ ಕರ್ಣನ್ ಅವರನ್ನ ಚೆನ್ನೈಗೆ ಕರೆ ತಂದು ನಾಳೆ ಅಥವಾ ನಾಡಿದ್ದು ನವದೆಹಲಿಗೆ ಕರೆದೊಯ್ದು ಸುಪ್ರೀಂಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ