ಕುಲಭೂಷಣ್ ಶೂನಿಂದ ಪಾಕ್ ಪ್ರಧಾನಿಗೆ ಎಸೆದರೆ 20 ಲಕ್ಷ ಬಹುಮಾನ: ಖಾದ್ರಿ ಘೋಷಣೆ

ಶನಿವಾರ, 20 ಮೇ 2017 (13:50 IST)
ಪಾಕಿಸ್ತಾನದ ವಶದಲ್ಲಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾದವ್ ಅವರ ಶೂ ತೆಗೆದುಕೊಂಡು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆ ಎಸೆದವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಮೌಲಾನಾ ಅತಿಫ್ ಖಾದ್ರಿ ಘೋಷಿಸಿದ್ದಾರೆ.
 
ಕುಲಭೂಷಣ್ ಜಾದವ್ ಅವರ ಶೂ  ತೆಗೆದುಕೊಂಡು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ  ಕುತ್ತಿಗೆಗೆ ಹೊಡೆದವರನ್ನು ದೇಶಾದ್ಯಂತ ಮೆರವಣಿಗೆ ಮಾಡಿ ಅವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಹೇಳಿದ್ದಾರೆ.
 
ಈ ಹಿಂದೆ ಗಾಯಕ ಸೋನು ನಿಗಮ್ ಅವರ ಟ್ವೀಟ್ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಮೌಲಾನಾ ಅತಿಫ್ ಖಾದ್ರಿ ಸೋನು ನಿಗಮ್ ಅವರ ಕೇಶ ಮುಂಡನೆ ಮಾಡಿದವರಿಗೆ 10 ಲಕ್ಷ ರು.ಬಹುಮಾನ ನೀಡುವುದಾಗಿ  ಘೋಷಣೆ ಮಾಡಿದ್ದರು. ಆ ಮೂಲಕ ಗಾಯಕನ ವಿರುದ್ಧ ಸಮರ ಸಾರಿದ್ದರುಯ ಈ ಹೇಳಿಕೆ ಬೆನ್ನಲ್ಲೇ ಗಾಯಕ ಸೋನು ನಿಗಮ್ ತಮ್ಮ ಕೇಶ ಮುಂಡನೆ ಮಾಡಿಸಿಕೊಂಡು ಬಹಿರಂಗ ಸವಾಲೆಸೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ