ಪ್ರಯಾಗ್ ರಾಜ್: ಕಾಲ್ತುಳಿತದ ಬಳಿಕ ಮಹಾಕುಂಭಮೇಳದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕುಂಭಮೇಳಕ್ಕೆ ಭೇಟಿ ನೀಡುವವರು ಈ ಬದಲಾವಣೆ ಗಮನಿಸಿ.
ನಿನ್ನೆ ಮೌನಿ ಅಮವಾಸ್ಯೆ ದಿನ ಕೋಟ್ಯಾಂತರ ಮಂದಿ ಕುಂಭಮೇಳಕ್ಕೆ ಬಂದು ಪುಣ್ಯಸ್ನಾನ ಮಾಡಿದ್ದರು. ಆದರೆ ಈ ವೇಳೆ ಕಾಲ್ತುಳಿತ ಸಂಭವಿಸಿ 30 ಭಕ್ತರು ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಉತ್ತರ ಪ್ರದೇಶ ಸರ್ಕಾರ ಕುಂಭಮೇಳದಲ್ಲಿ ಕೆಲವೊಂದು ನಿಯಮಗಳ ಬದಲಾವಣೆ ಮಾಡಿದೆ.
ಇದುವರೆಗೆ ಕುಂಭಮೇಳದಲ್ಲಿ ವಿವಿಐಪಿ ಪಾಸ್ ಗಳನ್ನು ನೀಡಲಾಗಿತ್ತು. ನಿನ್ನೆ ಕಾಲ್ತುಳಿತದ ಘಟನೆ ಬಳಿಕ ವಿವಿಐಪಿ ಪಾಸ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಇಂದಿನಿಂದ ವಿವಿಐಪಿ ಪಾಸ್ ಕಿತ್ತು ಹಾಕಲಾಗಿದೆ. ಯಾವುದೇ ವಿಶೇಷ ಪಾಸ್ ಮೂಲಕ ವಾಹನಗಳ ಪ್ರವೇಶವಿರಲ್ಲ. ಈ ಮೂಲಕ ಭಕ್ತರ ಸುಗಮ ಸಂಚಾರಕ್ಕೆ ಏಕಮುಖ ರಸ್ತೆ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಗ್ ರಾಜ್ ನ ಗಡಿ ಭಾಗಗಳಲ್ಲೇ ನಾಲ್ಕು ಚಕ್ರದ ವಾಹನಗಳನ್ನು ತಡೆಯಲಾಗುತ್ತಿದೆ. ನಗರದಲ್ಲಿ ನಾಲ್ಕು ಚಕ್ರಗಳ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬೀದಿ ಬದಿ ವ್ಯಾಪಾರಿಗಳನ್ನು ರಸ್ತೆ ಬದಿಯಿಂದ ಖಾಲಿ ರಸ್ತೆಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಜನರನ್ನು ಅನಗತ್ಯವಾಗಿ ನಿಲ್ಲಿಸಬಾರದು ಎಂದು ಸೂಚನೆ ನೀಡಲಾಗಿದೆ.