ಲಾಲೂ-ನಿತೀಶ್ ದೋಸ್ತಿಯಲ್ಲಿ ಬಿರುಕು?!

ಭಾನುವಾರ, 2 ಜುಲೈ 2017 (11:13 IST)
ಪಾಟ್ನಾ: ಬಿಹಾರದಲ್ಲಿ ದೋಸ್ತಿ ಸರ್ಕಾರ ನಡೆಸುತ್ತಿರುವ ಆರ್ ಜೆಡಿ ಪಕ್ಷದ ಲಾಲೂ ಪ್ರಸಾದ್ ಯಾದವ್ ಮತ್ತು ಜೆಡಿಯು ವರಿಷ್ಠ ಹಾಗೂ ಸಿಎಂ ನಿತೀಶ್ ಕುಮಾರ್ ನಡುವಿನ ದೋಸ್ತಿಯಲ್ಲಿ ಬಿರುಕು ದಿನೇ ದಿನೇ ಹೆಚ್ಚುತ್ತಿದೆ.


ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಗೆ ಜೆಡಿಯು ಬಿಜೆಪಿಗೆ ಬೆಂಬಲ ಘೋಷಿಸುವುದರೊಂದಿಗೆ ಇವರಿಬ್ಬರ ನಡುವೆ ಅಸಮಾಧಾನ ಹುಟ್ಟಿಕೊಂಡಿತ್ತು. ಲಾಲೂ ಬಹಿರಂಗವಾಗಿಯೇ ನಿತೀಶ್ ರನ್ನು ಈ ವಿಚಾರದಲ್ಲಿ ಟೀಕಿಸಿದ್ದರು. ಇದೀಗ ಲಾಲೂ ಪ್ರಸಾದ್ ಯಾದವ್ ನಡೆಸಲುದ್ದೇಶಿಸಿರುವ ‘ಬಿಜೆಪಿ ಹಠಾವೋ’ ಸಮಾವೇಶಕ್ಕೆ ಹಾಜರಾಗದಿರಲು ನಿತೀಶ್ ಕುಮಾರ್ ತೀರ್ಮಾನಿಸಿರುವುದು ಇವರ ಸಂಬಂಧ ಮತ್ತಷ್ಟು ಹಳಸಿರುವುದರ ಸೂಚನೆಯಾಗಿದೆ.

ಹಾಗಿದ್ದರೂ ಇದು ಆರ್ ಜೆಡಿ ಪಕ್ಷ ಏಕಮಾತ್ರವಾಗಿ ನಡೆಸುವ ರಾಲಿ. ಇದರಲ್ಲಿ ಜೆಡಿಯು ಭಾಗವಹಿಸಬೇಕೆಂದೇನೂ ಇಲ್ಲ. ನಮ್ಮ ಮಿತ್ರತ್ವ ಸ್ಟ್ರಾಂಗ್ ಆಗಿದೆ ಎಂದು ಜೆಡಿಯು ವಕ್ತಾರರು ತೇಪೆ ಸಾರುವ ಯತ್ನ ನಡೆಸಿದ್ದಾರೆ. ಆದರೆ ಅಸಲಿಗೆ ಹೊರಗೆ ಕಂಡಂತೆ ಒಳಗೆ ಇಲ್ಲ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ