ದಲಿತರ ಮೇಲೆ ದೌರ್ಜನ್ಯ: ಪ್ರಧಾನಿ ಮೋದಿ ಮೌನದ ವಿರುದ್ಧ ಲಾಲು ಯಾದವ್ ವಾಗ್ದಾಳಿ

ಶುಕ್ರವಾರ, 22 ಜುಲೈ 2016 (18:19 IST)
ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳಲ್ಲಿ ಹೆಚ್ಚಳವಾಗಿದ್ದರೂ ಪ್ರಧಾನಿ ಮೋದಿ ಮೌನವಹಿಸಿರುವುದಕ್ಕೆ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಟೀಕಿಸಿದ್ದಾರೆ.
 
ಇತರರ ಕೆಮ್ಮು ದಮ್ಮಗಳಿಗೆ ಸಲಹೆ ನೀಡುವ ಪ್ರಧಾನಿ ಮೋದಿ, ತಮ್ಮ ಅಧಿಕಾರವಧಿಯಲ್ಲಿಯೇ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳಾಗುತ್ತಿದ್ದರೂ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
 
ಗೋರಖ್‌ಪುರ್‌ದಲ್ಲಿ ನಡೆಯಲಿರುವ ಸಭೆಯಲ್ಲಾದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಹೇಳಿಕೆ ನೀಡಲಿ ಎಂದು ಬಿಹಾರ್ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಟ್ವೀಟ್‌ಗೆ ಲಾಲು ಯಾದವ್ ಮರು ಟ್ವೀಟ್ ಮಾಡಿದ್ದಾರೆ. 
 
ಕಳೆದ ವಾರ ಗುಜರಾತ್‌ನಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಬಗ್ಗೆ ಮೌನವಹಿಸಿರುವ ಪ್ರಧಾನಿ, ಸಾಗರದಾಚೆ ಯಾವುದೇ ಘಟನೆ ನಡೆದರೆ ಕಂಬನಿ ಸುರಿಸುತ್ತಾರೆ. ಆದರೆ,ನಮ್ಮ ದೇಶದವರ ಮೇಲೆ ಹಲ್ಲೆ ನಡೆದಾಗ ಮೌನವಾಗಿರುತ್ತಾರೆ ಎಂದು ಲಾಲು ಯಾದವ್ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ