ತಿರುಚಿದ ಫೋಟೋ ಪ್ರಕಟಿಸಿ ತಮಾಷೆಗೊಳಗಾದ ಲಾಲೂ ಪ್ರಸಾದ್ ಯಾದವ್
ಈ ಸಮಾವೇಶದ ಬಗ್ಗೆ ಟ್ವಿಟರ್ ನಲ್ಲಿ ಫೋಟೋ ಒಂದನ್ನು ಲಾಲೂ ಪ್ರಕಟಿಸಿದ್ದರು. ಅಲ್ಲದೆ, ಲಾಲೂ ಎದುರುಗಡೆ ಯಾವ ಮುಖವೂ ನಿಲ್ಲಲ್ಲ. ಎಷ್ಟು ಜನ ಇದ್ದಾರೆಂದು ನೀವೇ ಲೆಕ್ಕ ಮಾಡಿ ಎಂದೂ ಬರೆದುಕೊಂಡಿದ್ದರು.
ಆದರೆ ಈ ಫೋಟೋದ ಬಗ್ಗೆ ಅನುಮಾನಗಳು ಮೂಡಿದ್ದವು. ನಂತರ ಇದು ಲಾಲೂ ಬೆಂಬಲಿಗರು ಫೋಟೋಶಾಪ್ ನಲ್ಲಿ ಲಕ್ಷಾಂತರ ಜನರನ್ನು ಕಾಣುವಂತೆ ತಿರುಚಿದ ಫೋಟೋ ಎಂದು ತಿಳಿದುಬಂತು. ಇದಾದ ಮೇಲೆ ಲಾಲೂ ಮೇಲೆ ಟೀಕೆಗಳ ಸುರಿಮಳೆಯಾಯ್ತು.