ಸ್ವದೇಶಿ ನ್ಯಾವಿಗೇಷನ್ ಬಳಸಿ ಲ್ಯಾಂಡಿಂಗ್!

ಶುಕ್ರವಾರ, 29 ಏಪ್ರಿಲ್ 2022 (13:46 IST)
ನವದೆಹಲಿ : ಏಷ್ಯಾ ಪೆಸಿಫಿಕ್ ವಲಯದಲ್ಲಿ ಮೊದಲ ಬಾರಿಗೆ ಇಂಡಿಗೋ ಸ್ವದೇಶಿ ನ್ಯಾವಿಗೇಷನ್ ಸಿಸ್ಟಮ್ ‘ಗಗನ್’ ಅನ್ನು ಬಳಸಿಕೊಂಡು ವಿಮಾನವನ್ನು ಲ್ಯಾಂಡ್ ಮಾಡಿದೆ.
 
ಎಟಿಆರ್-72 ವಿಮಾನ ಜಿಯೋ ಆಗ್ಮೆಂಟೆಡ್ ನ್ಯಾವಿಗೇಷನ್(ಗಗನ್) ಜಿಪಿಎಸ್ ಬಳಸಿಕೊಂಡು ಬುಧವಾರ ರಾಜಸ್ಥಾನದ ಕಿಶನ್ಗಢ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು.

ಗಗನ್ ಅನ್ನು ಸೆಂಟರ್-ರನ್ ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಜಂಟಿಯಾಗಿ ಅಭಿವೃದ್ಧಿಪಡಿಸಿದೆ. 

ವಿಮಾನ ಲ್ಯಾಂಡಿಂಗ್ ಮಾಡಲು ರನ್ವೇ ಸಮೀಪಿಸುವ ಸಂದರ್ಭದಲ್ಲಿ ಪಾರ್ಶ್ವ ಹಾಗೂ ಲಂಬ ಮಾರ್ಗದರ್ಶನವನ್ನು ಇದು ನೀಡುತ್ತದೆ. ಕೆಲವು ಸಣ್ಣ ವಿಮಾನ ನಿಲ್ದಾಣಗಳಲ್ಲಿ ಇನ್ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಮ್(ಐಎಲ್ಎಸ್) ಇಲ್ಲದೇ ಇರುವ ಸಂದರ್ಭದಲ್ಲಿ ಇದು ಬಹಳ ಉಪಯುಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ