ಲಷ್ಕರ್ ಕಮಾಂಡರ್ ಜುನೈದ್ ಮಟ್ಟು ಸೇರಿ ಮೂರು ಉಗ್ರರು ಎನ್ ಕೌಂಟರ್ ಗೆ ಬಲಿ
ಶುಕ್ರವಾರ, 16 ಜೂನ್ 2017 (16:27 IST)
ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭಾರತೀಯ ಸೇನೆ ನಡೆಸಿದ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಜುನೈದ್ ಮಟ್ಟು ಸೇರಿದಂತೆ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ.
ಅನಂತನಾಗ್ ಜಿಲ್ಲೆಯ ಅರ್ವಾನಿ ಗ್ರಾಮದಲ್ಲಿ ಜುನೈದ್ ಮಟ್ಟು ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಯೋಧರು ಬೆಳಗ್ಗೆ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕಾರ್ಯಾಚರಣೆಯಲ್ಲಿ ಜುನೈದ್ ಮಟ್ಟು ಸೇರಿದಂತೆ ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ.
ಜುನೈದ್ ಮಟ್ಟು ಕಳೆದ ಎರಡು ವರ್ಷಗಳಿಂದ ಲಷ್ಕರ್ ಪರ ಕೆಲಸ ಮಾಡುತ್ತಿದ್ದು ಆತನ ತಲೆಗೆ 10 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ಸೇನೆ ಮತ್ತು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.