ನವದೆಹಲಿ: ಭಾರತೀಯ ನಾಗರಿಕರ ಪ್ರಮುಖ ದಾಖಲೆಯಾದ ಆಧಾರ್ ಕಾರ್ಡ್ ನವೀಕರಣ ಮಾಡಲು ಈಗ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಈ ಒಂದು ದಿನದೊಳಗಾಗಿ ಉಚಿತವಾಗಿ ನವೀಕರಣ ಮಾಡಬಹುದಾಗಿದೆ.
ಕಣ್ತಪ್ಪಿನಿಂದಲೋ, ಅಧಿಕಾರಿಗಳ ಎಡವಟ್ಟಿನಿಂದಲೋ ಆಧಾರ್ ಕಾರ್ಡ್ ನಲ್ಲಿ ಕೆಲವೊಮ್ಮೆ ನಿಮ್ಮ ಹೆಸರು ಅಥವಾ ಇನ್ನಿತರ ಮಾಹಿತಿಗಳಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಗಳಾಗಿಬಿಡುತ್ತವೆ. ಆದರೆ ಆಧಾರ್ ಸಾಮಾನ್ಯವಾಗಿ ಎಲ್ಲಾ ಸರ್ಕಾರೀ ದಾಖಲೆಗಳಿಗೆ ಅಗತ್ಯವಾಗಿರುವುದರಿಂದ ಇಂತಹ ತಪ್ಪುಗಳಿದ್ದರೆ ಸಮಸ್ಯೆಯಾಗಿಬಿಡುತ್ತದೆ.
ಹೀಗಾಗಿ ಇದನ್ನು ಶುಲ್ಕ ರಹಿತವಾಗಿ ನವೀಕರಣ ಮಾಡಲು ಸರ್ಕಾರ ಡಿಸೆಂಬರ್ 14 ರವರೆಗೆ ಅವಕಾಶ ಮಾಡಿಕೊಟ್ಟಿದೆ. ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಮೇಲ್ಪಟ್ಟಿದ್ದರೆ ಅದನ್ನು ನವೀಕರಿಸಬೇಕಾಗುತ್ತದೆ. ನಿಮ್ಮ ಹೆಸರು, ವಿಳಾಸವನ್ನು ಡಿಸೆಂಬರ್ 14 ರೊಳಗಾಗಿ ನವೀಕರಿಸಿಕೊಳ್ಳಬಹುದು.
ಆನ್ ಲೈನ್ ನಲ್ಲಿ ನವೀಕರಿಸುವುದು ಹೇಗೆ
UIDAI ವೆಬ್ ಸೈಟ್ ಗೆ ಹೋಗಿ ನನ್ನ ಆಧಾರ್ ನಲ್ಲಿ ಅಪ್ ಡೇಟ್ ಯುವರ್ ಆಧಾರ್ ಬಟನ್ ಕ್ಲಿಕ್ ಮಾಡಿ. ಈಗ ಡಾಕ್ಯುಮೆಂಟ್ ಅಪ್ ಡೇಟ್ ಕ್ಲಿಕ್ ಮಾಡಬೇಕು. ಇಲ್ಲಿ ನಿ್ಮ ವಿವರಗಳನ್ನು ನೀಡಿ, ಆಧಾರ್ ಸಂಖ್ಯೆ, ಕ್ಯಾಪ್ಚಾ ಭರ್ತಿ ಮಾಡಿ. ಬಳಿಕ ಒಟಿಪಿ ಕಳುಹಿಸಿ ಬಟನ್ ಕ್ಲಿಕ್ ಮಾಡಿ. ಈಗ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಈ ಒಟಿಪಿಯೊಂದಿಗೆ ಲಾಗಿನ್ ಆಗಬೇಕು. ಇಲ್ಲಿ ನವೀಕರಣ ಆಯ್ಕೆ ಕ್ಲಿಕ್ ಮಾಡಿ ನಿಮ್ಮ ಹೆಸರು, ವಿಳಾಸ ಇತ್ಯಾದಿಗಳನ್ನು ನೀಡಬೇಕು. ನಂತರ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸು ಬಟನ್ ಪ್ರೆಸ್ ಮಾಡಿ. ಈಗ ನಿಮಗೊಂದು ನವೀಕರಣ ವಿನಂತಿ ಸಂಖ್ಯೆ ಸಿಗುತ್ತದೆ. ಇದನ್ನು ಉಳಿಸಿಕೊಳ್ಳಿ. ಈ ಸಂಖ್ಯೆ ಮೂಲಕ ನಿಮ್ಮ ನವೀಕರಣ ಸ್ಥಿತಿ ಗತಿ ಬಗ್ಗೆ ತಿಳಿದುಕೊಳ್ಳಬಹುದು.
ಒಂದು ವೇಳೆ ನೀವು ಬಯೋಮೆಟ್ರಿಕ್ ಬದಲಾವಣೆಗಳನ್ನು ಮಾಡಲು ಬಯಸಿದರೆ ಆಫ್ ಲೈನ್ ಆಧಾರ್ ಕೇಂದ್ರಕ್ಕೆ ತೆರಳಿ ಪ್ರಕ್ರಿಯೆಗಳನ್ನು ಪೂರ್ತಿ ಮಾಡಬೇಕಾಗುತ್ತದೆ. ಆಧಾರ್ ಕೇಂದ್ರಕ್ಕೆ ಹೋಗಿ ನವೀಕರಣ ಮಾಡಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ. ಅಥವಾ ಯುಐಡಿಎಐ ವೆಬ್ ಸೈಟ್ ನಿಂದ ಆಧಾರ್ ಅಪ್ ಡೇಟ್ ಅಪ್ಲಿಕೇಷನ್ ಫಾರಂ ಡೌನ್ ಲೋಡ್ ಮಾಡಿ ವಿವರ ಭರ್ತಿ ಮಾಡಿ ಆಧಾರ್ ಕೇಂದ್ರದಲ್ಲಿ ಸಲ್ಲಿಸಬಹುದು.