ವಿವಾಹದಲ್ಲಿ ಸ್ನೇಹಿತರಿಂದ ಥಳಿತಕ್ಕೊಳಗಾದ ವಕೀಲ! ಮುಂದೇನಾಯ್ತು?

ಸೋಮವಾರ, 11 ಜುಲೈ 2022 (13:10 IST)
ಲಕ್ನೋ : ಮದುವೆಯೊಂದರಲ್ಲಿ ಸ್ನೇಹಿತರೊಂದಿಗೆ ನಡೆದ ಜಗಳದಲ್ಲಿ ಥಳಿತಕ್ಕೊಳಗಾದ ವಕೀಲನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಆಶಿಶ್ ತ್ಯಾಗಿ(27) ಆತ್ಮಹತ್ಯೆಗೆ ಶರಣಾದ ವಕೀಲ. ಗಾಜಿಯಾಬಾದ್ನ ಜಿಲ್ಲಾ ನ್ಯಾಯಾಲಯದಲ್ಲಿ ಅಭ್ಯಾಸ ನಡೆಸುತ್ತಿದ್ದ ಆಶಿಶ್ ತ್ಯಾಗಿ ಮನೆಯಲ್ಲಿ ಒಬ್ಬರೇ ಇದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆತನ ತಂದೆ ಮತ್ತು ಸಹೋದರಿ ಊರಿಗೆ ಹೋಗಿದ್ದರು.

ಮದುವೆ ಸಮಾರಂಭದಲ್ಲಿ ಆಶೀಶ್ ಹಾಗೂ ಆತನ ಸ್ನೇಹಿತರ ನಡುವೆ ವಾಗ್ವಾದ ಮಿತಿಮೀರಿದ್ದು, ಆತನ ಸ್ನೇಹಿತರು ಆಶಿಶ್ನನ್ನು ಥಳಿಸಿ ಅವನ ಬಳಿ ಇದ್ದ ಚಿನ್ನಾಭರಣವನ್ನು ದೋಚಿದ್ದಾರೆ.

ಆ ನಂತರ ಆತನ ಸ್ನೇಹಿತರೇ ಅವನನ್ನು ಮನೆಗೆ ಬಿಟ್ಟು ಹೋಗಿದ್ದಾರೆ. ಇದರಿಂದ ಮನನೊಂದ ಆಶಿಶ್ ಸ್ನೇಹಿತನಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಷ್ಟೇ ಅಲ್ಲದೇ ಆಶಿಶ್ ಮದುವೆಯೊಂದರಲ್ಲಿ ನಡೆದ ಗಲಾಟೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಆಶಿಶ್ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾವು ಎಲ್ಲಾ ರೀತಿಯ ತನಿಖೆಯನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ