ಅಳಿಯನ ಜೊತೆ ಅತ್ತೆ ಅನೈತಿಕ ಸಂಬಂಧ

ಬುಧವಾರ, 6 ಜುಲೈ 2022 (09:30 IST)
ಜೈಪುರ: ಅಳಿಯ ಎಂದರೆ ಒಬ್ಬ ಹೆಣ್ಣಿಗೆ ಮಗನ ಸಮಾನ. ಆದರೆ ಈ ಮಹಿಳೆ ಅಳಿಯನೊಂದಿಗೇ ಅನೈತಿಕ ಸಂಬಂಧಕ್ಕಿಳಿದಿದ್ದಳು.

38 ವರ್ಷದ ಮಹಿಳೆ ತನ್ನ ಮಗಳ ಗಂಡನಾಗಿದ್ದ 22 ವರ್ಷದ ಯುವಕನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಪ್ರೇಮದ ಅಮಲಿನಲ್ಲಿ ಸಂಬಂಧ ಮರೆತು ಇಬ್ಬರೂ ಜೊತೆಯಾಗಿ ಓಡಾಡಲು ಆರಂಭಿಸಿದಾಗ ಉಳಿದವರಿಗೆ ಅನುಮಾನ ಮೂಡಿದೆ.

ಆದರೆ ತಮ್ಮನ್ನು ಸಮಾಜ ಕೀಳಾಗಿ ನೋಡಬಹುದು ಎಂಬ ಭಯದಲ್ಲಿ ಇಬ್ಬರೂ ಓಡಿ ಹೋಗಿ ನಿರ್ಜನ ಪ್ರದೇಶವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ