ಪಂಚ ರಾಜ್ಯಗಳಲ್ಲಿ ಸೋತ ಪ್ರಮುಖರು

ಸೋಮವಾರ, 3 ಮೇ 2021 (09:50 IST)
ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖರೆನಿಸಿಕೊಂಡಿದ್ದವರು ಸೋತು ಸುಣ್ಣವಾಗಿದ್ದಾರೆ. ಅಂತಹ ಸೋತ ಪ್ರಮುಖರ ಲಿಸ್ಟ್ ಇಲ್ಲಿದೆ.


ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಅಭೂತಪೂರ್ವ ಬಹುಮತ ಪಡೆದರೂ ನಾಯಕಿ ಮಮತಾ ಬ್ಯಾನರ್ಜಿಗೆ ನಂದೀಗ್ರಾಮದಲ್ಲಿ ಸೋಲಾಗಿದೆ. ತೀವ್ರ ಪೈಪೋಟಿ ಎದುರಿಸಿದ ದೀದಿ ಕೊನೆಗೂ ಸೋಲಬೇಕಾಗಿದೆ. ಇನ್ನು, ಕೇರಳದಲ್ಲಿ ಪಾಲಕ್ಕಾಡ್ ನಲ್ಲಿ ಗೆಲುವಿನ ಲೆಕ್ಕಾಚಾರ ಹಾಕಿದ್ದ ಬಿಜೆಪಿಯ ಇ. ಶ್ರೀಧರನ್ ಗೆ ಸೋಲಾಗಿದೆ. ಹಾಗೆಯೇ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಮಂಜೇಶ್ವರದಲ್ಲಿ ಸೋಲು ಅನುಭವಿಸಿದ್ದಾರೆ.

ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಿ ಗೆಲುವಿನ ಭರವಸೆಯಲ್ಲಿದ್ದ ಕಮಲ್ ಹಾಸನ್ ಗೆ ಜನ ಸೋಲಿನ ಆಘಾತ ನೀಡಿದ್ದಾರೆ.ಅದೇ ರೀತಿ ಬಂಗಾಳದಲ್ಲಿ ಬಾಬುಲ್ ಸುಪ್ರಿಯೋ ಸೋತ ಪ್ರಮುಖ ನಾಯಕ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ