ಟಿಎಂಸಿ ಗೆದ್ದರೂ ಮಮತಾಗೆ ಎಚ್ಚರಿಕೆ ಕೊಟ್ಟ ಬಂಗಾಳ ಚುನಾವಣೆ

ಸೋಮವಾರ, 3 ಮೇ 2021 (09:41 IST)
ಕೋಲ್ಕೊತ್ತಾ: ಈ ಬಾರಿ ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಗೆಲುವು ಸಿಕ್ಕಿದರೂ ಮಮತಾ ನಿದ್ದೆಗೆಡಿಸುವ ಅಂಶವೊಂದು ಕಂಡುಬಂದಿದೆ.


ಪಶ್ಚಿಮ ಬಂಗಾಲದಲ್ಲಿ ಇದುವರೆಗೆ ಬಿಜೆಪಿ ಅಷ್ಟೊಂದು ಪ್ರಾಬಲ್ಯ ಹೊಂದಿರಲಿಲ್ಲ. ಆದರೆ ಈ ಬಾರಿ ಬಿಜೆಪಿ ಇಲ್ಲಿ 75 ಸೀಟ್ ಗೆದ್ದಿರುವುದು ಮಮತಾಗೆ ಎಚ್ಚರಿಕೆಯ ಕರೆಗಂಟೆಯೇ ಸರಿ. ಕಳೆದ ಬಾರಿ ಕೇವಲ 3 ಸ್ಥಾನ ಗೆದ್ದಿದ್ದ ಬಿಜೆಪಿಗೆ ಈ ಬಾರಿ ಇದು ಪ್ಲಸ್ ಪಾಯಿಂಟ್.

ಅಷ್ಟೇ ಅಲ್ಲ, ನಂದೀಗ್ರಾಮದಲ್ಲೂ ಮಮತಾ ಸೋಲು ಅನುಭವಿಸಬೇಕಾಯಿತು. ಇಲ್ಲಿಯೂ ಬಿಜೆಪಿ ಜೊತೆಗೆ ತೀವ್ರ ಪೈಪೋಟಿ ಎದುರಿಸಿದರು. ಹೀಗಾಗಿ ಬಿಜೆಪಿ ಈ ಬಾರಿ ವಿಧಾನಸಭೆ ಚುನಾವಣೆ ಸೋತರೂ ಭವಿಷ್ಯದಲ್ಲಿ ಈ ರಾಜ್ಯದಲ್ಲಿ ಕಮಲ ಅರಳಿಸುವ ಭರವಸೆ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ