ಲಿವ್ ಇನ್ ಪಾರ್ಟ್ನರ್ಳನ್ನು ಕೊಂದು ದೇಹವನ್ನು ಪೀಸ್ ಪೀಸ್ ಮಾಡಿದ!

ಗುರುವಾರ, 8 ಜೂನ್ 2023 (08:14 IST)
ಮುಂಬೈ : ಲಿವ್ ಇನ್ ಪಾರ್ಟ್ನರ್ ಳನ್ನು ಕೊಲೆಗೈದು ಬಳಿಕ ದೇಹವನ್ನು ಪೀಸ್ ಪೀಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
 
ಬಂಧಿತನನ್ನು ಮನೋಜ್ ಸಹಾನಿ (56) ಎಂದು ಗುರುತಿಸಲಾಗಿದೆ. ಈತ ಕಳೆದ ಮೂರು ವರ್ಷಗಳಿಂದ ಮೀರಾ ರೋಡ್ ಪ್ರದೇಶದ ಆಕಾಶಗಂಗಾ ಕಟ್ಟಡದ ಬಾಡಿಗೆ ಫ್ಲಾಟ್ನಲ್ಲಿ ಸರಸ್ವತಿ ವೈದ್ಯ ಎಂಬಾಕೆಯೊಂದಿಗೆ ವಾಸವಾಗಿದ್ದ.

ಇತ್ತ ಕಟ್ಟಡದ ನಿವಾಸಿಗಳು ಬುಧವಾರ ನಯಾನಗರ ಪೊಲೀಸ್ ಠಾಣೆಗೆ ಕರೆ ಮಾಡಿದ್ದು, ದಂಪತಿಯ ಫ್ಲಾಟ್ನಿಂದ ದುರ್ವಾಸನೆ ಬರುತ್ತಿದೆ ಎಂದು ದೂರಿದ್ದಾರೆ. ಅಂತೆಯೇ ಥಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಭಯಾನಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. 

ಪ್ರಾಥಮಿಕ ತನಿಖೆಯಿಂದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮುಂಬೈನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಯಂತ್ ಬಜ್ಬಲೆ ಪ್ರತಿಕ್ರಿಯಿಸಿ, ಪೊಲೀಸರು ಮೀರಾ ರೋಡ್ ಪ್ರದೇಶದಲ್ಲಿನ ಸೊಸೈಟಿಯಿಂದ ತುಂಡಾಗಿ ಕತ್ತರಿಸಿದ ಮಹಿಳೆಯ ಶವವನ್ನು ಪತ್ತೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ