ಲಾಕ್ ಡೌನ್ ವಿಸ್ತರಣೆ; ಇಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್

ಶನಿವಾರ, 11 ಏಪ್ರಿಲ್ 2020 (10:23 IST)

ಆದರೆ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ ಮಾತ್ರ ಖಚಿತ. ದೇಶದ ಜನತೆಯನ್ನು ಉದ್ದೇಶಿಸಿ ನಾಳೆ ಅಥವಾ ಮಂಗಳವಾರ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ನಗರಗಳಲ್ಲಿ ಲಾಕ‍್ ಡೌನ್ ವಿಸ್ತರಣೆ ಬಗ್ಗೆ ಗೊಂದಲ ಇಲ್ಲ. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ಅವಕಾಶ ನೀಡಲಾಗುವುದು. ಈ ಬಗ್ಗೆ ಸಿಎಂಗಳ ಜತೆ ಇಂದು ಪ್ರಧಾನಿ ಮಾತುಕತೆ ನಡೆಸಲಿದ್ದಾರೆ.

 

ಗ್ರಾಮೀಣ ಭಾಗದಲ್ಲಿ ಸಡಿಲಿಕೆ ಮಾಡುವುದಾದರೆ, ರಾಜ್ಯಗಳು ಕೊರೊನಾ ಹರಡದಂತೆ ಪ್ಲ್ಯಾನ್ ನೀಡಬೇಕು. ಗ್ರಾಮೀಣ ಭಾರತ ಬಹುತೇಕ ಕೊರೊನಾ ದಿಂದ ಮುಕ್ತವಾಗಿದೆ. ಆದರೆ ಸಡಿಲಿಕೆ ಚಾನ್ಸ್ ತೆಗೆದುಕೊಳ್ಳಬೇಕೇ ಎಂಬ ಪ್ರಶ್ನೆ ವ್ಯಕ್ತವಾಗಿದೆ. ಜಪಾನ್, ಸಿಂಗಾಪುರ ಲಾಕ್ ಡೌನ್ ಬಗ್ಗೆ ಪ್ರಧಾನಿ ಮೋದಿ ಅಧ್ಯಯನ ಮಾಡುತ್ತಿದ್ದು,  ಈ ಬಗ್ಗೆ ಶಿಂಬೋ ಅಬೆ ಜತೆ ಮೋದಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ದೇಶದ 11 ರಾಜ್ಯಗಳಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣ ಇರುವ ಹಿನ್ನಲೆಯಲ್ಲಿ ಆ ರಾಜ್ಯಗಳಲ್ಲಿ ಲಾಕ್ ಡೌನ್ ವಿಸ್ತರಣೆ ಖಚಿತ ಎನ್ನಲಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ