ಅದರಂತೆ ಶಾಲಾ ಕಾಲೇಜುಗಳು ಬಂದ ಮಾಡಲಾಗುವುದು. ಎಲ್ಲ ರೀತಿಯ ಸಾರಿಗೆ ವ್ಯವಸ್ಥೆ ಬಂದ್ ಮಾಡಲಾಗಿದ್ದು, ಮೆಟ್ರೋ, ರೈಲೂ ಸೇವೆಯೂ ಬಂದ್. ಅಗತ್ಯ ವಸ್ತು ಸಾಗಿಸಲು ಪಾಸ್ ಅಗತ್ಯವಿಲ್ಲ. ಕೃಷಿ ಚಟುವಟಿಕೆಗೆ ವಿನಾಯ್ತಿ. ಸರಕು ಸಾಗಣೆ ವಾಹನಗಳಿಗೆ ಮುಕ್ತ ಅವಕಾಶ. ಅಂತಾರಾಜ್ಯ ವಾಹನ ಓಡಾಟ ಬಂದ್. ಮದ್ಯ ಮಾರಾಟಕ್ಕೆ ವಿನಾಯಿತಿ ಇಲ್ಲ. ಗ್ರಾಮೀಣ ಭಾಗದ ಕೈಗಾರಿಕೆಗಳಿಗೆ ವಿನಾಯ್ತಿ. ಹಣ್ಣು, ತರಕಾರಿ , ಮಾಂಸ ಮಾರಾಟಕ್ಕೆ ಅವಕಾಶ. ಧಾರ್ಮಿಕ ಕ್ಷೇತ್ರಗಳು ಬಂದ್, ರಸ್ತೆ, ಕಟ್ಟಡ ಕಾಮಗಾರಿಗೆ ಕೇಂದ್ರ ಅನುಮತಿ ನೀಡಿದೆ.
ಹಾಗೇ ಎಲ್ಲಾ ರಾಜ್ಯಗಳು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ. ಈ ಮಾರ್ಗಸೂಚಿ ಏ.20ರಿಂದ ಜಾರಿಗೆ ಬರಲಿದೆ. ಆದರೆ ಹಾಟ್ ಸ್ಪಾಟ್ ಗಳಲ್ಲಿ ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ ಎಂಬುದಾಗಿ ತಿಳಿಸಿದೆ.