ಪಕ್ಷಿಗಳ ಹಸಿವು ನೀಗಿಸಲು ಮುಂದಾದ ಪೊಲೀಸರು

ಬುಧವಾರ, 15 ಏಪ್ರಿಲ್ 2020 (10:23 IST)
ನವದೆಹಲಿ: ಮನುಷ್ಯರು ಮಾಡಿಕೊಂಡಿರುವ ಲಾಕ್ ಡೌನ್ ಪ್ರಾಣಿ, ಪಕ್ಷಿಗಳ ಮೇಲೂ ಪರಿಣಾಮ ಬೀರಿದೆ. ಬೇಕರಿ, ಹೋಟೆಲ್ ಗಳಿಲ್ಲದೇ, ಜನ ಮನೆಯಿಂದ ಹೊರಬಾರದೇ ಪ್ರಾಣಿಗಳೂ ಆಹಾರವಿಲ್ಲದೇ ಪರಿದಾಡುವಂತಾಗಿದೆ.


ದೆಹಲಿ ಪೊಲೀಸರು ತಮ್ಮ ಕರ್ತವ್ಯದ ನಡುವೆ ಈಗ ಪಕ್ಷಿಗಳಿಗೆ, ಮಂಗಗಳಿಗೆ ಆಹಾರ, ನೀರು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಬೆಳಗಿನ ವೇಳೆ ಕಬೂತರ್ ಚೌಕ್ ಮತ್ತು ಆನಂದ್ ಮಾಯಿ ಮಾರ್ಗ್ ನಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಪೊಲೀಸರು ಆಹಾರ ಉಣಿಸುತ್ತಿದ್ದಾರೆ.

ಮನುಷ್ಯ ಸಂಚಾರವಿಲ್ಲದೇ ಆಹಾರ ಸಿಗದೇ ಮಂಗಗಳು ಕೆಲವು ಮನೆಗಳಿಗೆ ನುಗ್ಗಿ ಆಹಾರ ಹುಡುಕುವ ಪ್ರಯತ್ನ ನಡೆಸುವುದನ್ನು ಗಮನಿಸಿದ್ದೇವೆ. ಹೀಗಾಗಿ ಇವುಗಳಿಗೆ ಬಾಳೆ ಹಣ್ಣು, ಕಡಲೆ ಕಾಯಿ ನೀಡಿ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ