ಸ್ವಾಮಿ ನಾರಾಯಣ ದೇವರ ಮೂರ್ತಿಗೆ ಆರೆಸ್ಸೆಸ್ ಡ್ರೆಸ್ ತೊಡಿಸಿದ ಅಡಳಿತ ಮಂಡಳಿ

ಬುಧವಾರ, 8 ಜೂನ್ 2016 (13:14 IST)
ಸೂರತ್ ಮೂಲದ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ದೇವಾಲಯದ ಅಡಳಿತ ಮಂಡಳಿ ದೇವರ ಮೂರ್ತಿಗೆ ಆರೆಸ್ಸೆಸ್ ಡ್ರೆಸ್ ತೊಡಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಸ್ವಾಮಿನಾರಾಯಣ ದೇವರಿಗೆ ಬಿಳಿಯ ಶರ್ಟ್ ತೊಡಿಸಿ ಖಾಖಿ ಚಡ್ಡಿ ತೊಡಿಸಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿರುವ ಚಿತ್ರಗಳು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ವಿವಾದಕ್ಕೆ ಕಾರಣವಾಗಿದೆ. 
 
ಸ್ವಾಮಿ ವಿಶ್ವಪ್ರಕಾಶ್‌ಜಿಯವರ ಪ್ರಕಾರ, ಕೆಲ ದಿನಗಳ ಹಿಂದೆ ಭಕ್ತರು ಆರೆಸ್ಸೆಸ್ ಡ್ರೆಸ್‌ನ್ನು ಉಡುಗೊರೆಯಾಗಿ ನೀಡಿದ್ದರು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
 
ಸ್ವಾಮಿನಾರಾಯಣ ದೇವರನ್ನು ವಿವಿಧ ಡ್ರೆಸ್‌ಗಳಿಂದ ಅಲಂಕರಿಸುವುದು ಪದ್ದತಿ. ಆರೆಸ್ಸೆಸ್ ಡ್ರೆಸ್‌ನ್ನು ಭಕ್ತರೊಬ್ಬರು ನೀಡಿದ್ದರಿಂದ ಅದನ್ನು ದೇವರಿಗೆ ತೊಡಿಸಲಾಗಿದೆ. ಮತ್ತೆ ಬೇರೆ ಯಾವ ಉದ್ದೇಶವಿಲ್ಲ. ಇದು ವಿವಾದ ಸೃಷ್ಟಿಸಿದೆ ಎನ್ನುವುದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
 
ದೇವಸ್ಥಾನದ ಅಡಳಿತ ಮಂಡಳಿಯವರು ದೇವರಿಗೆ ಆರೆಸ್ಸೆಸ್ ಡ್ರೆಸ್ ತೊಡಿಸಿದ್ದರಲ್ಲಿ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ.ಆದರೆ, ಕಾಂಗ್ರೆಸ್ ದೇವಸ್ಥಾನದ ಅಡಳಿತ ಮಂಡಳಿಯ ನಡೆಯನ್ನು ತೀವ್ರವಾಗಿ ವಿರೋಧಿಸಿದೆ.
 

ವೆಬ್ದುನಿಯಾವನ್ನು ಓದಿ