ಉತ್ತರಾಖಂಡ ಚಮೋಲಿಯಲ್ಲಿ ಇಂದು ಮತ್ತೇ ಐದು ಶವ ಪತ್ತೆ, ಮೃತರ ಸಂಖ್ಯೆ 7ಕ್ಕೆ ಏರಿಕೆ

Sampriya

ಶುಕ್ರವಾರ, 19 ಸೆಪ್ಟಂಬರ್ 2025 (19:03 IST)
Photo Credit X
ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಮಳೆಯಿಂದ ತತ್ತರಿಸಿರುವ ಗ್ರಾಮಗಳಲ್ಲಿ ಶುಕ್ರವಾರ ಮತ್ತೆ ಐದು ಮೃತದೇಹಗಳು ಪತ್ತೆಯಾಗಿದೆ. ನಾಪತ್ತೆಯಾದವರ ಹುಡುಕಾಟದಲ್ಲಿ ರಕ್ಷಣಾ ತಂಡಗಳು ನಿರಂತರ ಕಾರ್ಯಚರಣೆ ನಡೆಸಿತ್ತು. 

ಈ ಮೂಲಕ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. 

ಡೆಹ್ರಾಡೂನ್‌ನಿಂದ ಸುಮಾರು 260 ಕಿಮೀ ಮತ್ತು ಗೋಪೇಶ್ವರದಲ್ಲಿರುವ ಚಮೋಲಿ ಜಿಲ್ಲಾ ಕೇಂದ್ರದಿಂದ 50 ಕಿಮೀ ದೂರದಲ್ಲಿರುವ ಚಮೋಲಿಯ ನಂದನಗರ ಪ್ರದೇಶದ ಕುಂಟಾರಿ ಲಗಾ ಫಾಲಿ, ಕುಂಟಾರಿ ಲಗಾ ಸರ್ಪಾನಿ, ಸೆರಾ ಮತ್ತು ಧುರ್ಮಾ ಎಂಬ ನಾಲ್ಕು ಗ್ರಾಮಗಳಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಯಿತು. 


ಗುರುವಾರ, ಕುಂಟಾರಿ ಲಗಾ ಫಲಿ ಮತ್ತು ಧುರ್ಮಾ ಗ್ರಾಮಗಳಿಂದ ಜೀವಂತವಾಗಿ ರಕ್ಷಿಸಲ್ಪಟ್ಟ ಐವರು ಸೇರಿದಂತೆ 12 ಜನರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರು ರಿಷಿಕೇಶದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

95 ಜನರನ್ನು ಮರಿಯಾ ಆಶ್ರಮ ಮತ್ತು ಗಾಲಾ ಗೋಡೌನ್‌ನಲ್ಲಿ ಸ್ಥಾಪಿಸಲಾದ ಪರಿಹಾರ ಶಿಬಿರಗಳಿಗೆ ಸಾಕಷ್ಟು ಆಹಾರ ಮತ್ತು ಔಷಧಿಗಳ ಪೂರೈಕೆಯೊಂದಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ