ಪ್ರೇಮ ಪ್ರಕರಣ: ಯುವಕನಿಗೆ ಥಳಿಸಿ, ಗುಪ್ತಾಂಗ ಕತ್ತರಿಸಿದ್ರು: ಪ್ರೇಯಸಿ ಮನೆ ಎದುರೇ ಚಿತೆ!
ಭಾನುವಾರ, 25 ಜುಲೈ 2021 (16:51 IST)
ಪಾಟ್ನಾ(ಜು.25): ಬಿಹಾರದ ಮುಜಫರ್ಪುರದಲ್ಲಿ ಪ್ರೇಮಿ ಯುವಕನನ್ನು ನಿರ್ದಯವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವಕನನ್ನು ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಥಳಿಸಲಾಗಿದೆ. ಅಲ್ಲದೇ ಆತನ ಗುಪ್ತಾಂಗವನ್ನೂ ಸಹ ಕತ್ತರಿಸಲಾಗಿದೆ.
* ಬಿಹಾರದ ಮುಜಫರ್ಪುರದಲ್ಲಿ ಯುವಕನ ಹತ್ಯೆ
* ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಥಳಿಸಿ ಯುವಕನನ್ನು ಕೊಂದ ಆರೋಪಿಗಳು
* ಪ್ರಿಯತಮೆ ಮನೆ ಎದುರೇ ಅಂತ್ಯಸಂಸ್ಕಾರ
ಈ ಘಟನೆ ಜಿಲ್ಲೆಯ ಕಾಂತಿ ಪೊಲೀಸ್ ಠಾಣಾ ವ್ಯಾಪ್ತಿಯ ರೆಪುರ ರಾಂಪುರ್ಸಾ ಮತ್ತು ಸೊನ್ವರ್ಷ ಗ್ರಾಮದಲ್ಲಿ ನಡೆದಿದೆ. ಇನ್ನು ಈ ಕೊಲೆ ನಡೆಸಿದ ನಂತರ, ಎಲ್ಲಾ ಆರೋಪಿಗಳು ತಮ್ಮ ಇಡೀ ಕುಟುಂಬದೊಂದಿಗೆ ಮನೆ ಬಿಟ್ಟು ತಪ್ಪಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಮೃತನನ್ನು ಆರೋಪಿಗಳ ಮನೆ ಎದುರೇ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ವಿಷಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದಾರೆ. ಈ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಮಾಹಿತಿಯ ಪ್ರಕಾರ, ರೆಪುರಾ ನಿವಾಸಿ ಮನೀಶ್ ಕುಮಾರ್ ಅವರ ಪುತ್ರ ಸೌರಭ್ಸೋನ್ವರ್ಷ ಗ್ರಾಮದ ಯುವತಿ ಜೊತೆ ಒಂದು ವರ್ಷದಿಂದ ಪ್ರೇಮ ಸಂಬಂಧ ಹೊಂದಿದ್ದ. ಈ ಸಂಬಂಧವನ್ನು ಹುಡುಗಿಯ ಕುಟುಂಬ ಸದಸ್ಯರು ಒಪ್ಪಲಿಲ್ಲ. ಕೆಲವು ತಿಂಗಳ ಹಿಂದೆ ಸೌರಭ್ನನ್ನು ಯುವತಿಯ ಕುಟುಂಬ ಸದಸ್ಯರು ಥಳಿಸಿದ್ದರು. ಈ ಬಗ್ಗೆ ಪಂಚಾಯತಿ ಕೂಡ ನಡೆದಿತ್ತು. ಈ ಕಾರಣದಿಂದಾಗಿ, ಸೌರಭ್ ತಂದೆ ಮಗನನ್ನು ಹೊರಗೆ ಕಳುಹಿಸಿದ್ದರು, ಆದರೆ ಇದರ ನಂತರ ಸೌರಭ್ ತನ್ನ ಸಹೋದರಿಯ ಮದುವೆಗಾಗಿ ಗ್ರಾಮಕ್ಕೆ ಬಂದದ್ದ. ಹೀಗಿರುವಾಗ ಶುಕ್ರವಾರ ಸಂಜೆ ಸೌರಭ್ ಪ್ರೀತಿಸಿದಾಕೆಯನ್ನು ಭೇಟಿಯಾಗಲು ಇದ್ದಕ್ಕಿದ್ದಂತೆ ಹುಡುಗಿಯ ಮನೆಗೆ ತಲುಪಿದ. ಈ ವಿಚಾರವಾಗಿ ಹುಡುಗಿಯ ಕುಟುಂಬ ಸದಸ್ಯರು ಕೋಪಗೊಂಡರು. ಬಾಲಕಿಯ ಕುಟುಂಬ ಸದಸ್ಯರು ಸೌರಭ್ ಅವರನ್ನುದೊಣ್ಣೆಯಿಂದ ಹೊಡೆದಿದ್ದು, ಇದರಿಂದಾಗಿ ಅವನು ಪ್ರಜ್ಞಾಹೀನನಾಗಿದ್ದಾನೆ. ಇದರ ನಂತರ ಆರೋಪಿ ಸೌರಭ್ ಗುಪ್ತಾಂಗವನ್ನಯ ಕತ್ತರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆಯ ಸಮಯದಲ್ಲಿ ಸೌರಭ್ ಸಾವನ್ನಪ್ಪಿದ್ದಾನೆ.
ಇನ್ನು ಮೃತ ವ್ಯಕ್ತಿಯ ತಂದೆ ಹಾಗೂ ಚಿಕ್ಕಪ್ಪ ಸೌರಭನನ್ನು ಯೋಜಿತ ಪಿತೂರಿಯಡಿಯಲ್ಲಿ ಕರೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮಗನ ಹತ್ಯೆಯ ನಂತರ, ಆರೋಪಿಗಳು ತಂದೆ ಮನೀಶ್ ಕುಮಾರ್ ಅವರನ್ನು ತಮ್ಮ ಮನೆಗೆ ಕರೆದು ಮಗ ತಪ್ಪು ಮಾಡಿದ್ದ, ಹೀಗಾಗಿ ಆತನನ್ನು ಆಯುಧಗಳಿಂದ ಥಳಿಸಲಾಯಿತು. ಜೀವಂತವಾಗೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಕಾಗದದಲ್ಲಿ ಬರೆದು ಸಹಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಅವರ ಪ್ರಕಾರ ಹುಡುಗಿಯ ಚಿಕ್ಕಪ್ಪ ಪ್ರಶಾಂತ್ ಕುಮಾರ್ ಸೌರಭನನ್ನು ಕೊಂದಿದ್ದಾರೆ ಎಂದಿದ್ದಾರೆ. ಘಟನೆ ಬೆನ್ನಲ್ಲೇ ಸಂಬಂಧಿಕರು ಕಾಂತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಘಟನೆಯ ನಂತರ, ಆರೋಪಿ ಇಡೀ ಕುಟುಂಬವು ಮನೆಗೆ ಬೀಗ ಹಾಕಿ ಪರಾರಿಯಾಗಿದೆ.
ಮೃತ ವ್ಯಕ್ತಿಯ ಶವ ಮನೆಗೆ ತಲುಪಿದ ನಂತರ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೆರಳಿದ ಗ್ರಾಮಸ್ಥರು ಆರೋಪಿಗಳ ಮನೆಯ ಮೇಲೆ ದಾಳಿ ಮಾಡಿದೆ. ಆದರೆ ಅಲ್ಲಿದ್ದ ಪೊಲೀಸರು ಜನರನ್ನು ತಡೆದಿದ್ದಾರೆ. ಅಂತಿಮವಾಗಿ ಗ್ರಾಮಸ್ಥರು ಆರೋಪಿಗಳ ಮನೆ ಎದುರೇ ಮೃತನ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ಈ ಪ್ರದೇಶದಲ್ಲಿ ಸಾಕಷ್ಟು ಉದ್ವಿಗ್ನತೆ ಉಂಟಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಹತ್ತಿರದ ಕಾರ್ಜಾ, ಪಣಾಪುರ ಒಪಿ, ಬ್ರಹ್ಮಪುರ ಮತ್ತು ಕಾಂತಿ ಸೇರಿದಂತೆ ಸದರ್ ಪೊಲೀಸ್ ಠಾಣೆಗಳನ್ನು ಎಚ್ಚರಿಸಲಾಗಿದೆ. ಮೃತರ ಸಂಬಂಧಿಕರ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಎಸ್ಪಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ಮರಣೋತ್ತರ ವರದಿಯ ಆಧಾರದ ಮೇಲೆ ಸತ್ಯ ಹೊರಬರಲಿದೆ. ಸದ್ಯ ಆರೋಪಿಗಳನ್ನು ಬಂಧಿಸಲು ಪೊಲೀಸರು ದಾಳಿ ನಡೆಸುತ್ತಿದ್ದಾರೆ