ವಿದೇಶದಲ್ಲಿದ್ದು ಲವ್ ಮಾಡಿದ : ಊರಿಗೆ ಬಂದು ಕಿಡ್ನಾಪ್ ಮಾಡೋದಾ

ಶನಿವಾರ, 26 ಸೆಪ್ಟಂಬರ್ 2020 (11:07 IST)
ಆತ ವಿದೇಶದಲ್ಲಿದ್ದನು. ಫೇಸ್ ಬುಕ್ ನಲ್ಲಿ ಹುಡುಗಿಯೊಂದಿಗೆ ಪ್ರೀತಿ ಮಾಡೋಕೆ ಶುರುಮಾಡಿದ್ದನು. ಲವ್, ಮದುವೆ ಮಾತುಕತೆ ಇಬ್ಬರ ನಡುವೆ ಜೋರಾಗಿತ್ತು. ಆದರೆ…

ಫೇಸ್ ಬುಕ್ ನಲ್ಲಿ ಲವ್ ಮಾಡುತ್ತಿದ್ದ ಜೋಡಿಗಳಲ್ಲಿ ಇಬ್ಬರೂ ಮಾಡಬಾರದ್ದನ್ನು ಮಾಡಿದ್ದಾರೆ.

ನೆನ್ಹೆ ಎಂಬಾತ ವಿದೇಶದಲ್ಲಿದ್ದಾಗಲೇ ಉತ್ತರ ಪ್ರದೇಶದ ಯುವತಿಯೊಬ್ಬಳೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದನು.

ಉತ್ತರ ಪ್ರದೇಶಕ್ಕೆ ಬಂದ ಮೇಲೆ ಮದುವೆಯಾಗೋದಾಗಿ ಯುವತಿಗೆ ತಿಳಿಸಿದ್ದನು. ಆದರೆ ಆತ ಬರುವಷ್ಟರಲ್ಲಿ ಪ್ರೇಯಸಿಯು ಬೇರೋಬ್ಬನೊಂದಿಗೆ ಓಡಿ ಹೋಗಿದ್ದಳು.

ಈ ವಿಷಯ ತಿಳಿದ ನೆನ್ಹೆ, ತನ್ನ ಪ್ರೇಯಸಿಯನ್ನು ಓಡಿಸಿಕೊಂಡು ಹೋಗಿದ್ದವನ ಅಣ್ಣನ ಒಂದುವರೆ ವರ್ಷದ ಮಗುವನ್ನು ಕಿಡ್ನಾಪ್ ಮಾಡಿದ್ದ. ತನ್ನ ಪ್ರೇಯಸಿಯನ್ನು ತನಗೆ ಒಪ್ಪಿಸುವಂತೆ ಹೇಳಿದ್ದನು. ಆದರೆ ಮಗುವಿನ ತಂದೆ ಕಿಡ್ನಾಪ್ ಕೇಸ್ ದಾಖಲು ಮಾಡಿದ್ದರಿಂದಾಗಿ ಯುವಕ ನೆನ್ಹೆ ಅರೆಸ್ಟ್ ಆಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ