ಸೈಫ್ ಅಲಿ (25) ಬುರ್ಕಾ ಧರಿಸಿ ಪೊಲೀಸರಿಗೆ ಸಿಕ್ಕಿಬಿದ್ದ ವ್ಯಕ್ತಿಯಾಗಿದ್ದಾನೆ. ಈತನಿಗೆ ಬೇರೆ ಸ್ಥಳದಲ್ಲಿ ಕೆಲಸ ಸಿಕ್ಕಿತ್ತು. ಇದರಿಂದಾಗಿ ಊರಿನಿಂದ ಹೋಗುವ ಮೊದಲು ಗೆಳತಿಯನ್ನು ಒಮ್ಮೆ ಭೇಟಿಯಾಗಲು ಬಯಸಿದ್ದ.
ಆದರೆ ಮೆಹಮದ್ಪುರದಲ್ಲಿ ಹೆಚ್ಚು ಜನರು ಪರಿಚಯಸ್ಥರೇ ಇದ್ದಿದ್ದರಿಂದ ಆತ ಗೆಳತಿಯನ್ನು ಭೇಟಿ ಮಾಡುವಾಗ ಯಾರಾದರೂ ನೋಡಿ ಏನನ್ನಾದರೂ ಹೇಳುತ್ತಾರೆ ಎನ್ನುವ ಭಯದಿಂದ ತನ್ನ ಗುರುತನ್ನು ಮರೆಮಾಚಲು ಬುರ್ಕಾವನ್ನು ಧರಿಸುವ ಯೋಚನೆಯನ್ನು ಮಾಡಿಕೊಂಡ.
ಸೈಫ್ ಅಲಿ ಮಾರನೇ ದಿನ ತನ್ನ ಯೋಚನೆಯಂತೆ ಗೆಳತಿಯನ್ನು ಭೇಟಿಯಾಗಲು ಬುರ್ಕಾ ಧರಿಸಿ ಹೋಗಿದ್ದ. ಆದರೆ ಅಲ್ಲಿದ್ದ ಸ್ಥಳೀಯರಿಗೆ ಬುರ್ಕಾ ಧರಿಸಿದವನು ಹುಡುಗ ಎಂದು ತಿಳಿದು ಏನೋ ತೊಂದರೆ ಮಾಡಲು ಬಂದಿದ್ದಾರೆ ಎನ್ನುವ ಅನುಮಾನ ಬಂದಿದೆ.