ಮಧ್ಯ ಪ್ರದೇಶ ಮದರಸಾದಲ್ಲೂ ರಾಷ್ಟ್ರಗೀತೆ ಕಡ್ಡಾಯಕ್ಕೆ ಚಿಂತನೆ!

ಶನಿವಾರ, 14 ಮೇ 2022 (08:55 IST)
ಭೋಪಾಲ್‌: ಉತ್ತರ ಪ್ರದೇಶದ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಕೂಡಾ ಇದೇ ಮಾದರಿಯ ಕ್ರಮವನ್ನು ತಮ್ಮ ರಾಜ್ಯದಲ್ಲೂ ಅಳವಡಿಸುವುದಾಗಿ ಹೇಳಿದ್ದಾರೆ. 
 
‘ಉತ್ತರ ಪ್ರದೇಶ ಸರ್ಕಾರವು ಒಳ್ಳೆಯ ನಿರ್ಧಾರ ಕೈಗೊಂಡಿದೆ. ರಾಷ್ಟ್ರಗೀತೆ ಹಾಡುವುದನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಕಡ್ಡಾಯಗೊಳಿಸಬೇಕು. ರಾಜ್ಯದಲ್ಲೂ ಈ ಕ್ರಮ ಜಾರಿ ಬಗ್ಗೆ ಚಿಂತಿಸಲಾಗುವುದು’ ಎಂದು ಮಿಶ್ರಾ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣು ದತ್ತ ಶರ್ಮಾ ‘ದೇಶದ ಎಲ್ಲ ಮೂಲೆಗಳಲ್ಲು ರಾಷ್ಟ್ರ ಗೀತೆ, ಭಾರತ ಮಾತಾ ಕೀ ಜೈ ಘೋಷಣೆಗಳು ಮೊಳಗಬೇಕು’ ಎಂದಿದ್ದಾರೆ.
 
ಉತ್ತರಪ್ರದೇಶದ ಎಲ್ಲ ಮಸೀದಿಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವುದನ್ನು ಗುರುವಾರದಿಂದಲೇ ಜಾರಿಗೆ ಬರುವಂತೆ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಉತ್ತರಪ್ರದೇಶದ ಮದರಸಾ ಶಿಕ್ಷಣ ಮಂಡಳಿಯ ನೋಂದಣಾಧಿಕಾರಿ ಎಸ್‌.ಎನ್‌. ಪಾಂಡೆ ಅವರು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳಿಗೆ ಮೇ 9ರಂದು ಆದೇಶ ಹೊರಡಿಸಿದ್ದು, ಅದು ಗುರುವಾರದಿಂದ ಜಾರಿಗೆ ಬಂದಿದೆ.
 
ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸುವ ಬಗ್ಗೆ ಮಾ.24ರಂದು ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಮದರಸಾಗಳಲ್ಲಿ ಮೇ 12ರಿಂದ ತರಗತಿಗಳು ಆರಂಭವಾಗಿದ್ದು, ಆ ಪ್ರಕಾರ ಗುರುವಾರದಿಂದಲೇ ರಾಷ್ಟ್ರಗೀತೆ ಕಡ್ಡಾಯವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ