ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ !

ಶುಕ್ರವಾರ, 25 ಮಾರ್ಚ್ 2022 (09:45 IST)
ಲಕ್ನೋ : ಉತ್ತರ ಪ್ರದೇಶದಾದ್ಯಂತ ಇರುವ ಮದರಸಾಗಳಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಮುನ್ನ ಬೆಳಗ್ಗೆ ಪ್ರಾರ್ಥನಾ ಗೀತೆಯೊಂದಿಗೆ ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಪಠಿಸಬೇಕು ಎಂದು ಮದರಸಾ ಶಿಕ್ಷಣ ಮಂಡಳಿಯು ತಿಳಿಸಿದೆ.

2017ರಲ್ಲಿ ಶಿಕ್ಷಣ ಮಂಡಳಿಯು ಸ್ವಾತಂತ್ರ್ಯ ದಿನದಂದು ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಾರೋಹಣವನ್ನು ಕಡ್ಡಾಯಗೊಳಿಸಿದ ಸುಮಾರು ಐದು ವರ್ಷಗಳ ನಂತರ ಈ ನಿರ್ಧಾರ ಕೈಗೊಂಡಿದೆ.

ಇದೇ ವೇಳೆ ಹಾಜರಾತಿ ಮತ್ತು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಲವಾರು ಇತರ ನಿರ್ಧಾರಗಳನ್ನು ಶಿಕ್ಷಣ ಮಂಡಳಿಯು ಅಧ್ಯಕ್ಷ ಇಫ್ತಿಕಾರ್ ಅಹ್ಮದ್ ಜಾವೇದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದೆ. ಅಲ್ಲದೇ ಮದ್ರಸಾ ಶಿಕ್ಷಕರಾಗಲು (ಟಿಇಟಿ) ಪರೀಕ್ಷೆ ಬರೆದು ಅರ್ಹತೆ ಪಡೆದಿರಬೇಕು ಎಂದು ಸೂಚಿಸಲಾಗಿದೆ. 

ಶಿಕ್ಷಕರ ನೇಮಕಾತಿಯಲ್ಲಿ ಸ್ವಜನಪಕ್ಷಪಾತವು ಇರಬಾರದು ಆದೇಶವಾಗಿದೆ. ಇದಕ್ಕಾಗಿಯೇ ಮಂಡಳಿಯು ಎಂಟಿಇಟಿ ಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಆದರೆ ಆಯ್ಕೆ ಪ್ರಕ್ರಿಯೆಯನ್ನು ಶಿಕ್ಷಣ ಆಡಳಿತ ಮಂಡಳಿಯು ಅಂತಿಮಗೊಳಿಸುತ್ತದೆ. ಈ ಕುರಿತ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಇಫ್ತಿಕಾರ್ ಅಹ್ಮದ್ ಜಾವೇದ್ ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ