ಮಹಾದಾಯಿ ವಿವಾದ: ಪರಿಕ್ಕರ್ ಪತ್ರ ರಾಜಕೀಯ ಗಿಮಿಕ್ ಎಂದ ಗೋವಾ ಸಚಿವ
ಜಲ ಸಂಪನ್ಮೂಲ ಸಚಿವನಾಗಿ ನನ್ನ ನಿಲುವು ಸ್ಪಷ್ಟಪಡಿಸಿದ್ದೇನೆ. ಪರಿಕ್ಕರ್ ಅವರು ಪತ್ರದಲ್ಲಿ ಏನು ಬರೆದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಒಂದು ವೇಳೆ ಅವರು ಪತ್ರ ಬರೆದಿದ್ದರು ಅದು ರಾಜಕೀಯ ಗಿಮಿಕ್ ಅಷ್ಟೆ ಎಂದು ಗೋವಾ ಪಾರ್ವಡ್ ಪಕ್ಷದ ವಿನೋದ ತಿಳಿಸಿದ್ದಾರೆ.
ನೀರಿಗಾಗಿ ನಮ್ಮ ಜನರೇ ಪರದಾಡುತ್ತಿದ್ದಾರೆ. ನಮಗೆ ನೀರಿಲ್ಲ ಎಂದ ಮೇಲೆ ಬೇರೆಯವರಿಗೆ ನೀರು ಕೊಡಲು ಹೇಗೆ ಸಾಧ್ಯ? ಕರ್ನಾಟಕಕ್ಕೆ ಒಂದು ಹನಿ ನೀರು ಬಿಡುವುದಿಲ್ಲ. ನೆರೆ ರಾಜ್ಯಗಳೊಂದಿಗೆ ಮಹದಾಯಿ ನದಿಯ ಒಂದು ಹನಿ ನೀರು ಸಹ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.