ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ: ದಿನಾಂಕ ಪ್ರಕಟಕ್ಕೆ ಕ್ಷಣಗಣನೆ

Sampriya

ಮಂಗಳವಾರ, 15 ಅಕ್ಟೋಬರ್ 2024 (14:06 IST)
Photo Courtesy X
ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇಂದು ಮಧ್ಯಾಹ್ನ 3.30ಕ್ಕೆ ಚುನಾವಣಾ ಆಯೋಗ ಪ್ರಕಟಿಸಲಿದೆ.

ಚುನಾವಣಾ ಆಯೋಗದ ಆಯುಕ್ತರು ಪತ್ರಿಕಾಗೋಷ್ಠಿ ಕರೆದು ವಿವರಗಳನ್ನು ಪ್ರಕಟಿಸಿದೆ. ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಕೊನೆಗೊಂಡರೆ, ಜಾರ್ಖಂಡ್ ಮುಂದಿನ ವರ್ಷ ಜನವರಿ 5 ರಂದು ಕೊನೆಗೊಳ್ಳುತ್ತದೆ.

ಎರಡು ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳಲ್ಲದೆ, ವಿವಿಧ ಕಾರಣಗಳಿಂದ ತೆರವಾಗಿರುವ ಮೂರು ಲೋಕಸಭೆ ಮತ್ತು ಕನಿಷ್ಠ 47 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯನ್ನೂ ಚುನಾವಣಾ ಆಯೋಗ ಘೋಷಿಸಲಿದೆ. ಅದರಲ್ಲಿ ಕರ್ನಾಟಕದ ಚನ್ನಪಟ್ಟಣ ಸೇರಿದಂತೆ ಮೂರು ಕ್ಷೇತ್ರಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ.

ಕೇರಳದ ವಯನಾಡ್, ಮಹಾರಾಷ್ಟ್ರದ ನಾಂದೇಡ್ ಮತ್ತು ಪಶ್ಚಿಮ ಬಂಗಾಳದ ಬಸಿರ್ಹತ್ ಮೂರು ಲೋಕಸಭಾ ಸ್ಥಾನಗಳು ಖಾಲಿ ಇವೆ.

ವಯನಾಡ್ ಕ್ಷೇತ್ರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಟ್ಟು ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದರಿಂದ ತೆರವಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ನಾಂದೇಡ್ ಪ್ರತಿನಿಧಿಸಿದ್ದ ಕಾಂಗ್ರೆಸ್ ಸಂಸದ ವಸಂತ್ ಚವಾಣ್ ಮತ್ತು ಬಸಿರ್ ಹತ್ ಪ್ರತಿನಿಧಿಸಿದ್ದ ಟಿಎಂಸಿ ಸಂಸದ ಹಾಜಿ ಶೇಖ್ ನೂರುಲ್ ಇಸ್ಲಾಂ ಇತ್ತೀಚೆಗೆ ನಿಧನರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ