ಮಹಾರಾಷ್ಟ್ರದಲ್ಲಿ 3509 ಪರಿಷ್ಕೃತ ಕೊರೊನಾ ಸಾವು: ದೇಶದಲ್ಲಿ 4.18 ಲಕ್ಷಕ್ಕೇದ ಸಾವಿನ ಸಂಖ್ಯೆ
ದೇಶದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ತಗ್ಗುತ್ತಿದ್ದ ಲಕ್ಷಣ ಕಂಡು ಬಂದಿದ್ದರೂ ಮತ್ತೆ ಜಿಗಿತದ ಸೂಚನೆ ನೀಡಿದೆ. ಕಳೆದ ಒಂದು ದಿನದಲ್ಲಿ 42,015 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ನಿನ್ನೆಗೆ ಹೋಲಿಸಿದರೆ 12 ಸಾವಿರ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಕಳೆದ 24 ಗಂಟೆಯಲ್ಲಿ 36,977 ಮಂದಿ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 3.04 ಕೋಟಿಗೆ ಏರಿಕೆಯಾಗಿದೆ. ಅಲ್ಲದೇ ಸಕ್ರಿಯ ಪ್ರಕರಣಗಳ ಸಂಖ್ಯೆ 4.07 ಲಕ್ಷಕ್ಕೆ ಇಳಿದಿದೆ.