ಆಪ್ ವಿರೋಧಿಗಳಿಗೆ ಮುಖಭಂಗ: ಆಪ್ 20 ಶಾಸಕರಿಗೆ ಹೈಕೋರ್ಟ್ ನಿರಾಳತೆ

ಶುಕ್ರವಾರ, 23 ಮಾರ್ಚ್ 2018 (18:48 IST)
ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ 20 ಶಾಸಕರ ಶಾಸಕ ಸ್ಥಾನ ಅನರ್ಹಗೊಳಿಸುವುದನ್ನು ಹೈಕೋರ್ಟ್ ತಳ್ಳಿ ಹಾಕಿದ್ದರಿಂದ ಆಪ್ ಶಾಸಕರು ನಿರಾಳರಾದಂತಾಗಿದೆ.
ಆಪ್ ಶಾಸಕರ ಸರಿಯಾದ ವಿಚಾರಣೆಯನ್ನು ನೀಡಲಾಗಿಲ್ಲ ಎಂಬ ಆಧಾರದ ಮೇರೆಗೆ ನ್ಯಾಯಾಧೀಶರಾದ ಸಂಜೀವ್ ಖನ್ನಾ ಮತ್ತು ಚಂದರ್ ಶೇಖರ್, ತೀರ್ಪು ನೀಡಿದ್ದು, ಮತ್ತೆ ಚುನಾವಣೆ ಆಯೋಗ ಪುನರ್‌ಪರಿಶೀಲಿಸುವಂತೆ ಆದೇಶ ನೀಡಿದೆ.
 
ದೆಹಲಿ ಸರ್ಕಾರದಲ್ಲಿ 'ಸಂಸದೀಯ ಕಾರ್ಯದರ್ಶಿಗಳು' ಎಂಬ ಲಾಭದ ಹುದ್ದೆ ಹೊಂದಿದ್ದಾರೆ ಎನ್ನುವ ಕಾರಣಕ್ಕೆ 20 ಶಾಸಕರನ್ನು ಅನರ್ಹಗೊಳಿಸಿ ರಾಷ್ಟ್ರಪತಿ ಆದೇಶ ನೀಡಿದ್ದರು. ಆದೇಶ ವಿರೋಧಿಸಿ ಜನವರಿ 20 ರಂದು ಅನರ್ಹರಾದ ಎಎಪಿ ಶಾಸಕರಲ್ಲಿ ಎಂಟು ಮಂದಿ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು.
 
ಜನವರಿ 24 ರಂದು ಹೈಕೋರ್ಟ್‌ನ ಏಕ ನ್ಯಾಯಾಧೀಶರ ಪೀಠವು ಚುನಾವಣಾ ಆಯೋಗವನ್ನು, ದಿಲ್ಲಿ ಅಸೆಂಬ್ಲಿ ಸ್ಥಾನಗಳಿಗೆ ಪ್ರಕಟಿಸಿದ ದಿನಾಂಕವನ್ನು ತಡೆಹಿಡಿದು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಚುನಾವಣಾ ಆಯೋಗವನ್ನು ನಿರ್ದೇಶಿಸಿತ್ತು. 
 
ನೈಸರ್ಗಿಕ ನ್ಯಾಯದ ತತ್ವಗಳ ಉಲ್ಲಂಘನೆಯ ಆಧಾರದ ಮೇಲೆ ಶಾಸಕರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಮೋಹನ್ ಪರಸರಣ್ ವಾದ ಮಂಡಿಸಿದ್ದರು.
 
ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು 'ಲಾಭದ ಕಚೇರಿ' ಎಂದು ಪರಿಗಣಿಸಲಾಗದು. ಏಕೆಂದರೆ ಅದು 'ಲಾಭ' ಅಥವಾ ಹಣಕ್ಕೆ ಸಂಬಂಧಿಸಿದ ಲಾಭದ ಅಂಶವಾಗಿರುವುದಿಲ್ಲ ಎಂದು ಆಪ್ ಪರ ವಕೀಲರು ಕೋರ್ಟ್‌ನಲ್ಲಿ ತಮ್ಮ ಹೇಳಿಕೆ ಪ್ರಸ್ತಾಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ