ಲೋಕಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಿಷಯ ಪ್ರಸ್ತಾಪಿಸಿದ ಖರ್ಗೆ
ಗುರುವಾರ, 23 ಮಾರ್ಚ್ 2017 (12:43 IST)
ಬೆಂಗಳೂರಿನಲ್ಲಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿ 4 ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿರುವ ವಿಷಯವನ್ನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಲಾಗುತ್ತಿಲ್ಲ. ಈ ಮೊದಲು ಕೇಂದ್ರಸರ್ಕಾರ ಶೇ.90ರಷ್ಟು ಮತ್ತು ರಾಜ್ಯ ಸರ್ಕಾರ ಶೇ.10ರಷ್ಟು ವೇತನ ನೀಡುತ್ತಿತ್ತು. ಈಗ ಕೇಂದ್ರದ ಪಾಲನ್ನ ಶೇ.60ಕ್ಕೆ ಇಳಿಸಲಾಗಿದೆ. ಕೆಂದ್ರ ಸರ್ಕಾರ ಮೊದಲಿನ ರೀತಿಯೇ ಶೇ.90ರಷ್ಟು ಹಣ ಬಿಡುಗಡೆ ಮಾಡಬೇಕು. ಇದರಲ್ಲಿ ಕೇಂದ್ರ ಜವಾಬ್ದಾರಿ ಹೆಚ್ಚಿದೆ ಎಂದು ಮನವರಿಕೆ ಮಾಡಿದ್ದಾರೆ.
ಮಕ್ಕಳನ್ನ ನೋಡಿಕೊಳ್ಳುವ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಜನಗಣತಿ, ಚುನಾವಣೆ ಕೆಲಸಗಳನ್ನೂ ಮಾಡುತ್ತಾರೆ. ಅವರಿಗೆ ವೇತನ ಹೆಚ್ಚಿಸಲು ಕೆಂದ್ರ ಮುಂದಾಗಬೇಕು. ಎಲ್ಲ ರಾಜ್ಯಗಳಲ್ಲೂ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.