ವಕ್ಫ್ ಬಿಲ್ ತಂದಿದ್ದು ಸರಿಯಲ್ಲ, ಹಿಂಪಡೆಯದೇ ಇದ್ದರೆ ಗಲಾಟೆ ಆಗುತ್ತದೆ: ಮಲ್ಲಿಕಾರ್ಜುನ ಖರ್ಗೆ ವಾರ್ನ್

Krishnaveni K

ಶುಕ್ರವಾರ, 4 ಏಪ್ರಿಲ್ 2025 (11:55 IST)
ನವದೆಹಲಿ: ರಾಜ್ಯಸಭೆಯಲ್ಲಿ ವಕ್ಫ್ ಬಿಲ್ ಪಾಸ್ ಆದ ಬಳಿಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಬಿಲ್ ಸರಿಯಿಲ್ಲ. ಕೂಡಲೇ ಇದನ್ನು ವಾಪಸ್ ಪಡೆಯಿರಿ. ಇಲ್ಲದೇ ಇದ್ದರೆ ದೇಶದಲ್ಲಿ ಗಲಾಟೆಯಾಗುತ್ತದೆ ಎಂದು ಗೃಹಸಚಿವ ಅಮಿತ್ ಶಾಗೆ ಎಚ್ಚರಿಕೆ ನೀಡಿದ್ದಾರೆ.

ಮೊನ್ನೆ ಲೋಕಸಭೆಯಲ್ಲಿ ಬಹುಚರ್ಚಿತ ವಕ್ಫ್ ಮಸೂದೆ ಪಾಸ್ ಆಗಿತ್ತು. ನಿನ್ನೆ ರಾಜ್ಯಸಭೆಯಲ್ಲಿ ಬಹುಮತದೊಂದಿಗೆ ಮಸೂದೆ ಪಾಸ್ ಆಗಿತ್ತು. ಇದರ ಬೆನ್ನಲ್ಲೇ ಖರ್ಗೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.

‘ನೀವು ಪಾಸ್ ಮಾಡಿರುವ ಬಿಲ್ ಸರಿಯಿಲ್ಲ. ಇದರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. ಜನರ ನಡುವೆ ನೀವು ಧ್ವೇಷ ಬಿತ್ತುತ್ತಿದ್ದೀರಿ. ಹೀಗಾಗಿ ಗೃಹಸಚಿವರಿಗೆ ಹಿಂಪಡೆಯಲು ಮನವಿ ಮಾಡುತ್ತೇನೆ. ಇದನ್ನು ಪ್ರತಿಷ್ಠೆಯ ವಿಚಾರವಾಗಿಸಬೇಡಿ. ತಪ್ಪು ಸರಿಪಡಿಸುವದಕ್ಕೆ ಏನು ಸಮಸ್ಯೆ?  ದೇಶದ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ. ಅದನ್ನು ಹಿಂಪಡೆಯುವುದು ಸರಿ. ಇದು ಮುಸ್ಲಿಮರಿಗೆ ಒಳ್ಳೆಯದಲ್ಲ. ಇದು ಸಂವಿಧಾನ ಬಾಹಿರ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

‘ಇದೇ ಜನರು 1995 ಆಕ್ಟ್ ಸರಿ ಒಪ್ಪಿಕೊಂಡಿದ್ದರು. ಈಗ ಇವರೇ ಸರಿ ಇಲ್ಲ ಎಂದು ಬಡ ಮತ್ತು ಅಲ್ಪಸಂಖ್ಯಾತರಿಗೆ ಹೊಸ ನಿಯಮವನ್ನೇ ತರುತ್ತಿದ್ದಾರೆ. ಈ ಹೊಸ ನಿಯಮ ಅಲ್ಪಸಂಖ್ಯಾತರನ್ನು ದಮನಿಸಲು ತಂದಿರುವುದೇ ಹೊರತು ಮತ್ತೇನಿಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ