ಇತ್ತೀಚಿನ ಟ್ರೆಂಡ್ ಪ್ರಕಾರ, ಮಮತಾ ಚುನಾವಣೋತ್ತರ ಸಮೀಕ್ಷೆಗಳ ನಿರೀಕ್ಷೆಗಿಂತ ಹೆಚ್ಚಿನ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೆ ಏರಲಿದ್ದಾರೆ. ಚುನಾವಣೆಗೆ ಮುನ್ನ ಶಾರದಾ ಚಿಟ್ ಫಂಡ್ ಹಗರಣ ಮತ್ತು ನಾರದಾ ಕುಟುಕು ಕಾರ್ಯಾಚರಣೆಯಿಂದಾಗ ಮಮತಾಗೆ ಹಿನ್ನಡೆ ಉಂಟಾಗಿತ್ತು. ಕೋಲ್ಕತಾದಲ್ಲಿ ಫ್ಲೈಓವರ್ ಕುಸಿತದಿಂದ 27 ಜನರ ಸಾವು ಕೂಡ ಮಮತಾ ಸಂಕಷ್ಟ ಹೆಚ್ಚಿಸಿತ್ತು.