ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ

ಶುಕ್ರವಾರ, 27 ಮೇ 2016 (19:38 IST)
ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
 
ಭೂತಾನ ಪ್ರಧಾನಿ ಟಿ ಶೇರಿಂಗ್ ಟೊಬ್ಗೈ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಪ್ರಮಾಣ ವಚನ ಸ್ಕೀಕಾರ ಸಮಾರಂಭಕ್ಕೆ ಆಗಮಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಶುಭಕೋರಿದರು. 
 
ಕೋಲ್ಕತಾ ಮೇಯರ್ ಶೋವನ್ ಚಟರ್ಜಿ, ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಮತ್ತು ಗಾಯಕಿ ಇಂದ್ರಾನಿಲ್ ಸೇನ್ ಸೇರಿದಂತೆ 17 ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಿ ಅಚ್ಚರಿ ಮೂಡಿಸಿದ್ದಾರೆ.
 
ಸಚಿವರಾಗಿ ಆಶೀಶ್ ಬಂಡೋಪಾಧ್ಯಾಯ, ಜಮೇಸ್ ಕುಜುರ್, ತಪನ್ ದಾಸ್‌ಗುಪ್ತಾ, ಸ್ವಪನ್ ದೇಬನಾತ್, ಸಶಿ ಪಂಜಾ, ಸಿದ್ದಿಕುಲಾಹ್ ಚೌಧರಿ ಮತ್ತು ಆಶಿಮಾ ಪಾತ್ರಾ ಪ್ರಮಾಣ ವಚನ ಸ್ವೀಕರಿಸಿದರು.
 
ಪಶ್ಚಿಮ ಬಂಗಾಳಗದ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಬಹುಮತ ನೀಡಿ ಅಧಿಕಾರಕ್ಕೆ ತಂದಿರುವುದಕ್ಕಾಗಿ ಅಭಿನಂಧನೆಗಳನ್ನು ಸಲ್ಲಿಸುತ್ತೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಸ ವ್ಯಕ್ತಪಡಿಸಿದ್ದಾರೆ.
 
ಮುಂಬರುವ ದಿನಗಳಲ್ಲಿ ನಮ್ಮ ಸರಕಾರ ಮತ್ತಷ್ಟು ಜನಪ್ರಿಯ ಯೋಜನೆಗಳನ್ನು ಹಾಕಿಕೊಂಡು ಬಡವರಿಗೆ, ಶೋಷಿತರಿಗೆ, ದುರ್ಬಲರಿಗೆ ನ್ಯಾಯ ಒದಗಿಸಲಿದೆ ಸಿಎಂ ಮಮತಾ ಭರವಸೆ ನೀಡಿದರು. 

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ