ಮಮತಾ ಬ್ಯಾನರ್ಜಿ ಪ್ರಧಾನಿ ಹುದ್ದೆಗೆ ಸಮರ್ಥೆ: ಮೋದಿ ಆಪ್ತ ಬಾಬಾ ರಾಮದೇವ್

ಗುರುವಾರ, 8 ಡಿಸೆಂಬರ್ 2016 (16:11 IST)
ಪ್ರಧಾನಿ ಮೋದಿ ನಿಕಟವರ್ತಿ, ಬಿಜೆಪಿಯ ಸಮರ್ಥಕ ಬಾಬಾ ರಾಮದೇವ್ ಬಿಜೆಪಿಯ ಕಡು ವೈರಿ ಎಂದು ಗುರುತಿಸಿಕೊಳ್ಳುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೊಗಳುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಪ್ರಾಮಾಣಿಕತೆ ಸಂಕೇತ, ಸರಳ ವ್ಯಕ್ತಿತ್ವ ಹೊಂದಿರುವ ಅವರು ಪ್ರಧಾನಮಂತ್ರಿಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಅವರು ಹೊಗಳಿದ್ದಾರೆ. 
"ರಾಜಕೀಯದಲ್ಲಿ ಅವರ ಅರ್ಹತೆಯಬಗ್ಗೆ ಯಾವುದೇ ಪ್ರಶ್ನೆ ಇಲ್ಲ. ಚಹಾ ಮಾರುವವನ ಮಗ ಪ್ರಧಾನಿಯಾಗುತ್ತಾನೆಂದರೆ ಮಮತಾಜಿ ಕೂಡ ಪ್ರಧಾನಿಯಾಗಲು ಅರ್ಹರು ಎಂದಿದ್ದಾರೆ ಬಾಬಾ ರಾಮದೇವ್.
 
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಬಾಬಾ, ರಾಜಕಾರಣದಲ್ಲಿ ಮಮತಾ ಪ್ರಾಮಾಣಿಕತೆ ಮತ್ತು ಸರಳತೆಯ ಸಂಕೇತ ಎನ್ನಿಸಿಕೊಳ್ಳುತ್ತಾರೆ. ನಾನು ಅವರ ಸರಳತೆಯನ್ನು ಪ್ರೀತಿಸುತ್ತೇನೆ. ಅವರು ಚಪ್ಪಲಿ ಮತ್ತು ಸಾಮಾನ್ಯ ಸೀರೆಗಳನ್ನುಡುತ್ತಾರೆ. ಅವರು ಕಪ್ಪುಹಣವನ್ನು ಹೊಂದಿಲ್ಲ ಎಂದು ನನಗೆ ನಂಬಿಕೆ ಇದೆ ಎಂದಿದ್ದಾರೆ.
 
ಈ ಹಿಂದೊಮ್ಮೆ ನಾನು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾಗ ಎಡ ಪಕ್ಷ ಅಧಿಕಾರದಲ್ಲಿತ್ತು. ಎಡ ಪಂಥೀಯರು ಹೋಗಿ ಮಮತಾ ಅಧಿಕಾರಕ್ಕೇರಬೇಕು ಎಂದು ನಾನು ಆ ಸಂದರ್ಭದಲ್ಲಿ ಹೇಳಿದ್ದೆ. ಮತ್ತೀಗ ಅದೇ ಆಗಿದೆ ಎಂದವರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ