ಗೆಳೆಯನ ಕೊಂದು ಹಾವಿನ ಮೇಲೆ ಆರೋಪ ಹಾಕಿದ ಅಸಾಮಿ!
ಆರೋಪಿಯ ಮನೆಯಲ್ಲಿಯೇ ಸಂತ್ರಸ್ತನ ಮೃತದೇಹ ಸಿಕ್ಕಿತ್ತು. ಪಕ್ಕದಲ್ಲೇ ಸರ್ಪವೊಂದು ಸತ್ತುಬಿದ್ದಿತ್ತು. ರಾತ್ರಿ ಇಬ್ಬರೂ ಕುಡಿದು ಮಲಗಿದ್ದರು. ಮಲಗಿದ್ದಾಗ ಗೆಳೆಯನಿಗೆ ಹಾವು ಕಚ್ಚಿ ಸತ್ತಿದ್ದಾನೆ ಎಂದು ಆರೋಪಿ ಹೇಳಿಕೆ ನೀಡಿದ್ದ.
ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಆತ ಸಾವನ್ನಪ್ಪಿದ್ದು ಹಾವು ಕಡಿತದಿಂದಲ್ಲ ಎಂಬುದು ಸ್ಪಷ್ಟವಾಗಿತ್ತು. ವಿಚಾರಣೆ ನಡೆಸಿದಾಗ ಕುಡಿದು ಜಗಳವಾಡಿ ಸ್ನೇಹಿತನನ್ನು ಆರೋಪಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.