ಕುಂಭಮೇಳ ಮುಗಿದ ಮೇಲೆ ಗಂಗಾನದಿ ತಟದಲ್ಲಿ ಚಿನ್ನ, ಹಣಕ್ಕಾಗಿ ಹುಡುಕಾಡುತ್ತಿರುವ ಯುವಕನ ವಿಡಿಯೋ ವೈರಲ್
ಜನವರಿಯಲ್ಲಿ ಆರಂಭವಾದ ಮಹಾಕುಂಭಮೇಳ ಫೆಬ್ರವರಿ 26 ಶಿವರಾತ್ರಿಯಂದು ಸಮಾಪ್ತಿಯಾಯಿತು. ಕುಂಭಮೇಳಕ್ಕೆ 45 ಕೋಟಿಗೂ ಅಧಿಕ ಮಂದಿ ಭೇಟಿ ನೀಡಿ ಪುಣ್ಯಸ್ನಾನ ಮಾಡಿ ಹೋಗಿದ್ದಾರೆ.
ಕುಂಭಮೇಳದಲ್ಲಿ ಒಂದು ಬಾರಿ ಕಾಲ್ತುಳಿತದ ಅನಾಹುತವೂ ಆಗಿದೆ. ಇದೀಗ ಕುಂಭಮೇಳ ಮುಗಿದ ಬಳಿಕ ಪ್ರಯಾಗ್ ರಾಜ್ ಬಿಕೋ ಎನ್ನುತ್ತಿದೆ. ಕೆಲವೇ ಜನ ಭೇಟಿ ಕೊಡುವುದು ಬಿಟ್ಟರೆ ಪ್ರಯಾಗ್ ರಾಜ್ ನಲ್ಲಿ ಮೊದಲಿನ ಜನ ಜಂಗುಳಿಯಿಲ್ಲ.
ಇದೀಗ ಯುವಕನೊಬ್ಬ ಮೆಟಲ್ ಡಿಟೆಕ್ಟರ್ ಹಿಡಿದುಕೊಂಡು ಗಂಗಾನದಿ ತಟದ ಮರಳಿನಲ್ಲಿ ಜನ ಕಳೆದುಕೊಂಡ ವಸ್ತುಗಳನ್ನು ಹುಡುಕಾಡುತ್ತಿದ್ದಾನೆ. ಆಗಲೇ ಆತನಿಗೆ ಒಂದು ಚೈನು, ಸ್ವಲ್ಪ ನಾಣ್ಯಗಳು ಸಿಕ್ಕಿವೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.