ಅತ್ತಿಗೆ ಮೇಲೆ ಆಸೆಗೆ ಯುವಕ ಅಣ್ಣನನ್ನೇ ಕೊಂದ!
ಆರೋಪಿ ತನ್ನ ಅಣ್ಣ-ಅತ್ತಿಗೆ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ. ಬರಬರುತ್ತಾ ಅತ್ತಿಗೆ ಜೊತೆ ಸಲುಗೆ ಬೆಳೆಸಲು ಯತ್ನಿಸಿದ್ದ. ಇದರಿಂದ ಬೇಸತ್ತ ಆಕೆ ಗಂಡನ ಬಳಿ ಮೈದುನನ ಬಗ್ಗೆ ದೂರಿದ್ದಳು. ಹೀಗಾಗಿ ಆತ ಸಹೋದರನಿಗೆ ಬುದ್ಧಿ ಹೇಳಿದ್ದ.
ಇದೇ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆಗಿತ್ತು. ಈ ವೇಳೆ ಚಾಕುವಿನಿಂದ ಇರಿದು ಅಣ್ಣನನ್ನು ಕೊಲೆ ಮಾಡಿದ್ದ. ಬಳಿಕ ಅದನ್ನು ಅತ್ತಿಗೆ ತಲೆಗೆ ಕಟ್ಟಲು ಯತ್ನಿಸಿದ್ದ. ಆದರೆ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.